Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು » ಪರಂಬಿಕ್ಕುಲಂ ವನ್ಯಜೀವಿಧಾಮ

ಪರಂಬಿಕ್ಕುಲಂ ವನ್ಯಜೀವಿಧಾಮ, ಪಾಲಕ್ಕಾಡ್

6

ಪರಂಬಿಕ್ಕುಲಂ ವನ್ಯಜೀವಿಧಾಮವು ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಸಂಗಮ್ ಶ್ರೇಣಿಗಳಿಗೆ ಅಡ್ಡಲಾಗಿ ನೆಲೆಸಿದ್ದು, ಪಾಲಕ್ಕಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಮನಮೋಹಕ ವನ್ಯಧಾಮವು ತನ್ನೊಳಗೆ ಅನೇಕ ವಿಸ್ಮಯಕಾರಿ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟಿದೆ. ಅಲ್ಲದೆ ಇದು ಪರಿಸರ ಪ್ರಿಯರಿಗು, ವನ್ಯಜೀವಿ ಆಸಕ್ತರಿಗು, ಪ್ರೇಮಿಗಳಿಗು ಮತ್ತು ಚಾರಣಿಗರಿಗು ಹೇಳಿ ಮಾಡಿಸಿದ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ವನ್ಯಧಾಮದ ಪ್ರದೇಶವನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ ಕೋರ್ ವಲಯ, ಬಫ್ಫರ್ ವಲಯ ಮತ್ತು ಪ್ರವಾಸಿ ವಲಯ. ಪ್ರವಾಸಿಗರು ಇಲ್ಲಿ ಅಪರೂಪದ ಜೀವ ಪ್ರಬೇಧಗಳನ್ನು ನೋಡಬಹುದು. ಅವುಗಳಲ್ಲಿ ಹುಲಿ, ಚಿರತೆ, ಏಶಿಯಾದ ಆನೆ, ಕಡವೆ, ನಾಗರಹಾವು, ನೀಲಗಿರಿ ಲಂಗೂರ್, ನೀಲಗಿರಿ ತಹರ್, ಸಂಬಾರ್,ಬೊನ್ನೆಟ್, ಮಕಾಕೆಗಳು, ಚುಕ್ಕೆ ಜಿಂಕೆ, ಭಾರತದ ಕಾಡು ನಾಯಿ ಮತ್ತು ಆಮೆಗಳು ಪ್ರಮುಖವಾದುದಾಗಿವೆ. ಪಕ್ಷಿ ವೀಕ್ಷಕರು ಇಲ್ಲಿನ ಸಲೀಂ ಅಲಿ ಪಕ್ಷಿ ವಿಶ್ಲೇಷಣಾ ಕೇಂದ್ರ ಮತ್ತು ಸಲೀಂ ಅಲಿ ಗ್ಯಾಲರಿಯಿಂದ ಮಹತ್ವದ ಪ್ರಯೋಜನಗಳನ್ನು ಪಡೆಯಬಹುದು.

ಈ ವನ್ಯಧಾಮವು ಒಂದು ಅದ್ಭುತವಾದ ಚಾರಣದ ಹಾದಿಗಳನ್ನು ಒಳಗೊಂಡಿದೆ. ಪ್ರವಾಸಿಗರು ಇಲ್ಲಿನ ಅಧಿಕೃತ ಪ್ರಾಧಿಕಾರದಿಂದ ಅನುಮತಿ ಪಡೆದು ಇಡೀ ಪ್ರದೇಶವನ್ನು ಸುತ್ತಾಡಬಹುದು. ಜಂಗಲ್ ಕ್ಯಾಂಪ್‍ಗಳು, ರಾತ್ರಿ ಪ್ಯಾಕೇಜ್‍ಗಳು ಮತ್ತು ಪರಿಸರ ಶಿಕ್ಷಣ ಪ್ಯಾಕೇಜ್‍ಗಳು, ನೌಕಾ ವಿಹಾರಗಳು ಮತ್ತು ವೃಕ್ಷ ಕುಟೀರಗಳು ಇಲ್ಲಿ ಲಭ್ಯವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಕಾಣದ ಮುಖವನ್ನು ಪರಿಚಯಿಸುವ ಕೆಲಸಗಳನ್ನು ಮಾಡುತ್ತಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu