Search
 • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು » ಪಾಲಕ್ಕಾಡ್ ಕೋಟೆ

ಪಾಲಕ್ಕಾಡ್ ಕೋಟೆ, ಪಾಲಕ್ಕಾಡ್

1

ಪಾಲಕ್ಕಾಡ್ ಕೋಟೆ ಅಥವಾ ಟಿಪ್ಪುವಿನ ಕೋಟೆಯೆಂದೆ ಖ್ಯಾತಿ ಪಡೆದಿರುವ ಈ ಕೋಟೆಯು ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪಾರಂಪರಿಕ ಕಟ್ಟಡವಾಗಿದೆ. ಈ ಕೋಟೆಯು 1766ರಲ್ಲಿ ಮೈಸೂರಿನ ಪ್ರಸಿದ್ಧ ದೊರೆಯಾದ ಹೈದರಾಲಿಯಿಂದ ನಿರ್ಮಿಸಲ್ಪಟ್ಟಿತು. ಇದು ಪಾಲಕ್ಕಾಡ್ ನಗರದ ಹೃದಯಭಾಗದಲ್ಲಿ ನೆಲೆಗೊಂಡಿದ್ದು, ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

ಈ ಕೋಟೆಯನ್ನು ಮೈಸೂರಿನ ಅರಸರು ಪ್ರಮುಖವಾಗಿ ಸೈನಿಕ ಕಾರ್ಯಾಚಟುವಟಿಕೆಗಳಿಗಾಗಿ ಬಳಸುತ್ತಿದ್ದರು. ಈ ಕೋಟೆಗೆ ಸಮೀಪದಲ್ಲಿ ಸ್ಥಳೀಯವಾಗಿ ಕೋಟ್ಟ ಮೈದಾನಂ ಅಥವಾ ಕೋಟೆ ಮೈದಾನ ಎಂದು ಕರೆಯಲ್ಪಡುವ ವಿಶಾಲವಾದ ಮೈದಾನವಿದೆ. ಇತಿಹಾಸದ ಪ್ರಕಾರ ಈ ಮೈದಾನವನ್ನು ಹಿಂದಿನ ಕಾಲದಲ್ಲಿ ಟಿಪ್ಪುವಿನ ಸೈನ್ಯದ ಕುದುರೆ ಲಾಯವನ್ನಾಗಿ ಬಳಸಲಾಗುತ್ತಿತ್ತಂತೆ. ಅಲ್ಲದೆ ಈ ಮೈದಾನದಲ್ಲಿ ಅಶ್ವಗಳನ್ನು ಮತ್ತು ಸೈನಿಕರನ್ನು ಸದಾ ಸಜ್ಜಾಗಿ ಇಡುತ್ತಿದ್ದರಂತೆ. ಪ್ರಸ್ತುತ ಈ ಮೈದಾನವು ಸಭೆ, ಸಮಾರಂಭ, ಕ್ರೀಡೆ ಮತ್ತು ಪ್ರದರ್ಶನಗಳಿಗೆ ಅತ್ಯಂತ ಸೂಕ್ತವಾದ ಸ್ಥಳವಾಗಿ ಬಳಸಿಕೊಳ್ಳಲಾಗುತ್ತಿದೆ.

ಈ ಕೋಟೆಯಲ್ಲಿರುವ ಮತ್ತು ಸುತ್ತ-ಮುತ್ತಲಿನ ಆಕರ್ಷಣೆಗಳಲ್ಲಿ ಪ್ರಮುಖವಾದುದು ಎಂದರೆ ಹನುಮಾನ್ ಗುಡಿ, ಹುತಾತ್ಮರ ಸ್ತಂಭ, ಜಿಲ್ಲಾ ಉಪಕಾರಾಗೃಹ ಮತ್ತು ಒಂದು ಬಯಲು ರಂಗಮಂದಿರಗಳು ಈ ಪಟ್ಟಿಯಲ್ಲಿ ಸೇರಿವೆ.ಈ ಕೋಟೆಯನ್ನು ಭಾರತದ ಪ್ರಾಚ್ಯಶಾಸ್ತ್ರ ಇಲಾಖೆಯು ನಿರ್ವಹಣೆ ಮಾಡುತ್ತಿದೆ.ಸಮಯ : ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ (ಎಲ್ಲಾ ದಿನಗಳು).ಪ್ರವೇಶ ಶುಲ್ಕ : ಏನೂ ಇಲ್ಲ.ಇನ್ನಿತರ ಶುಲ್ಕಗಳು : 20 ರೂಪಾಯಿ (ಸ್ಥಿರ ಛಾಯಾಗ್ರಹಣ), 50 ರೂಪಾಯಿ (ವೀಡಿಯೋ ಕ್ಯಾಮೆರಾ)

One Way
Return
From (Departure City)
To (Destination City)
Depart On
24 Jun,Thu
Return On
25 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jun,Thu
Check Out
25 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jun,Thu
Return On
25 Jun,Fri