Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು » ಜೈನ್ ದೇವಾಲಯ

ಜೈನ್ ದೇವಾಲಯ, ಪಾಲಕ್ಕಾಡ್

2

ಜೈನ್ ದೇವಾಲಯವು ಪಾಲಕ್ಕಾಡಿನಲ್ಲಿರುವ ಒಂದು ಐತಿಹಾಸಿಕ ಸ್ಮಾರಕವಾಗಿದ್ದು, ಇದು ಈ ಊರಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಸ್ಪಷ್ಟವಾಗಿ ಅಭಿವ್ಯಕ್ತಪಡಿಸುತ್ತದೆ. ಇದು ಪಾಲಕ್ಕಾಡ್ ನಗರದಿಂದ ಆನತಿ ದೂರದಲ್ಲಿರುವ ಜೈನ್‍ಮೇಡು ಎಂಬ ಸುಂದರ ಸ್ಥಳದಲ್ಲಿ ನೆಲೆಗೊಂಡಿದೆ. ಚಂದ್ರನಾಥ ದೇವಾಲಯ ಎಂದು ಸಹ ಕರೆಯಲ್ಪಡುವ ಇದು ಗತಕಾಲದ ಭವ್ಯ ಇತಿಹಾಸದಿಂದಾಗಿ ಗಮನಸೆಳೆಯುತ್ತಿರುವ ದೇಶದ ಕೆಲವೆ ಕೆಲವು ಜೈನದೇವಾಲಯಗಳ ಸಾಲಿಗೆ ಸೇರುತ್ತದೆ. ಆ ದೃಷ್ಟಿಯಿಂದ ಇದು ಪ್ರವಾಸಿಗರು ಭೇಟಿಕೊಡಲೆ ಬೇಕಾದ ಸ್ಥಳವಾಗಿದೆ.

ಈ ಒಂದು ಸಣ್ಣ ಜೈನ ಧಾರ್ಮಿಕ ಮಂದಿರವನ್ನು ಗ್ರಾನೈಟ್‍ನಲ್ಲಿ ನಿರ್ಮಿಸಲಾಗಿದೆ. ಯಾವುದೇ ಕುಂದಾಗದೆ ಉಳಿದಿರುವ ಈ ಕುರುಹುಗಳು ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾದದ್ದು ಎಂದು ಭಾವಿಸಲಾಗಿದೆ. ಈ ದೇವಾಲಯವು 32 ಅಡಿ ಉದ್ದ ಮತ್ತು 20 ಅಡಿ ಅಗಲವೊಂದಿದ್ದು, ವಾಸ್ತು ಶಿಲ್ಪದ ಅದ್ಭುತ ಪ್ರತೀಕವಾಗಿ ನಿಂತಿದೆ. ಇಲ್ಲಿ ಚಂದ್ರನಾಥನ್, ವಿಜಯಲಕ್ಷ್ಮಿ ನಾಥನ್, ಋಷಭ ಮತ್ತು ಪದ್ಮಾವತಿಗಳ ವಿಗ್ರಹಗಳ ಜೊತೆಗೆ ಜೈನ ತೀರ್ಥಂಕರರ ಮತ್ತು ಯಕ್ಷಿಣಿಗಳ ಚಿತ್ರಗಳನ್ನು ಕಾಣಬಹುದು.

ಈ ದೇವಾಲಯದ ಸುತ್ತಮುತ್ತಲ ಪ್ರದೇಶವು ಕೇರಳ ಸಾಹಿತ್ಯದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಗಳಿಸಿಕೊಂಡಿದೆ. ಕೇರಳದ ಖ್ಯಾತ ಸಾಹಿತಿ ಕುಮರನ್ ಆಶನ್‍ರವರು ತಮ್ಮ ಮಹಾಕಾವ್ಯ ವೀಣಾ ಪೂವುವನ್ನು ಜೈನ್‍ಮೇಡುವಿನಲ್ಲಿದ್ದಾಗ ರಚಿಸಿದರೆಂದು ಹೇಳಲಾಗುತ್ತದೆ. ಹಿಂದೊಮ್ಮೆ ಇಲ್ಲಿ ನೆಲೆಸಿದ್ದ 400 ಜೈನ ಕುಟುಂಬಗಳಿಂದ ಪೂಜಿಸಲ್ಪಡುತ್ತಿದ್ದ ಈ ಜೈನ ದೇವಾಲಯವು, ಇಂದು ಪ್ರವಾಸಿಗರ ಮತ್ತು ಇತಿಹಾಸ ಪ್ರಿಯರ ನೆಚ್ಚಿನ ಯಾತ್ರಾಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed