ಮೀನುಗಾರಿಕೆಯು ಪಹಲ್ಗಾಂನ ಅತ್ಯಂತ ಪ್ರಸಿದ್ಧ ಚಟುವಟಿಕೆಗಳಲ್ಲಿ ಒಂದಾಗಿದೆ. ಪ್ರವಾಸಿಗರು ಶ್ರೀನಗರದಲ್ಲಿರುವ ಪ್ರವಾಸಿ ವಿಚಾರಣಾ ಕೇಂದ್ರದಲ್ಲಿ ಮೀನುಗಾರಿಕೆ ಇಲಾಖೆಯಿಂದ ಅನುಮತಿಯನ್ನು ಪಡೆದು ಮೀನುಗಳು ಹೆಚ್ಚಾಗಿರುವ ಲಿಡ್ಡರ್ ಮತ್ತು ಶೇಷ್‍ನಾಗ್‍ನಲ್ಲಿ ತಮ್ಮ ಮೀನುಗಾರಿಕೆಯ ಕೌಶಲ್ಯವನ್ನು ಪರೀಕ್ಷಿಸಬಹುದು. ಇಲ್ಲಿನ ಕಾನೂನಿನಂತೆ ಒಬ್ಬರು ಒಂದು ದಿನಕ್ಕೆ ಗರಿಷ್ಠ 6 ಮೀನುಗಳನ್ನು ಮಾತ್ರ ಹಿಡಿಯಬಹುದಾಗಿದೆ. ಈ ಅನುಮತಿಯು 3 ದಿನದ ಮಟ್ಟಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಲ್ಲದೆ ಪ್ರವಾಸಿಗರು ತೆಗೆದುಕೊಳ್ಳುವ ಗಾಳಗಳಿಗನುಗುಣವಾಗಿ ಅವರು ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಏಪ್ರಿಲ್‍ನಿಂದ ಸೆಪ್ಟೆಂಬರ್ ವರೆಗಿನ ಅವಧಿಯು ಇಲ್ಲಿ ಮೀನುಗಾರಿಕೆಯನ್ನು ಮಾಡಲು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಇಲ್ಲಿ ಹವಾಮಾನವು ಸಹ ಅನುಕೂಲಕರವಾಗಿರುತ್ತದೆ.


Click it and Unblock the Notifications