ಅರು ಪಹಲ್ಗಾಂನಿಂದ 11 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸಮುದ್ರಮಟ್ಟದಿಂದ 2408 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಪ್ರವಾಸಿಗರು ಮಂತ್ರಮುಗ್ಧಗೊಳಿಸುವಂತಹ ಕಣಿವೆಯ ಸುಂದರ ನೋಟವನ್ನು ಕಾಣಬಹುದು. ಲಿಡ್ಡರ್ ವಟ್‍ನಿಂದ ಕೊಲಹೊಯ್‍ಗೆ ಸಾಗುವ ಚಾರಣವು ಸಾಹಸಿ ಮನೋಭಾವದವರಿಗೆ ಹೇಳಿ ಮಾಡಿಸಿದ ಚಟುವಟಿಕೆಯಾಗಿದೆ. ಈ ತಾಣವು ಹಚ್ಚ ಹಸಿರಿನ ಹುಲ್ಲುಗಾವಲಿನ ನಡುವೆ ನೆಲೆಗೊಂಡಿದ್ದು, ಪ್ರವಾಸಿಗರು ಶಿಬಿರವನ್ನು ಹಾಕಲು ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಕಣಿವೆಯಿಂದ ಇಳಿದು ಸುಲಭವಾಗಿ ಈ ಸ್ಥಳವನ್ನು ತಲುಪಬಹುದು. ಇದಲ್ಲದೆ ಸಾಹಸೀ ಮನೋಭಾವದವರು ಅರುವನ್ನು ಮೂಲನೆಲೆಯಾಗಿ ಬಳಸಿಕೊಂಡು ಸೋನಾಮಾರ್ಗ್ ಗೆ 3 ದಿನಗಳ ಚಾರಣವನ್ನು ಕೈಗೊಳ್ಳಬಹುದು. ಅಲ್ಲದೆ ಅನುಕೂಲಸ್ಥರು ಸಣ್ಣಕುದುರೆಗಳನ್ನು ಸಹ ಬಾಡಿಗೆಗೆ ಪಡೆಯಬಹುದು.


Click it and Unblock the Notifications