ಐಶ್‍ಮುಕಾಮ್ ಶ್ರೀನಗರದಿಂದ 86 ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಬೆಟ್ಟವಾಗಿದೆ. ಇಲ್ಲಿ ಪ್ರಸಿದ್ಧ ಸೂಫಿ ಸಂತ ಬಾಬಾ ಝೈನ-ಉದ್-ದಿನ್ ವಾಲಿಯವರ ಪವಿತ್ರ ಸಮಾಧಿ ಇದೆ. ಇವರನ್ನು "ಝೈನೊ ಶಾ ಸಾಹಿಬ್" ಎಂದು ಸಹ ಕರೆಯುತ್ತಾರೆ. ಈ ಸಮಾಧಿಯು ಒಂದು ಗುಹೆಯ ಒಳಭಾಗದಲ್ಲಿ ನೆಲೆಗೊಂಡಿದೆ. ಇಲ್ಲಿ ಸೂಫಿ ಸಂತರಿಗೆ ಸೇರಿದ ಪ್ರವಾದಿ ಮೋಸೆಸ್‍ರವರ "ಪವಿತ್ರ ದಂಡ"ವನ್ನು ಸಹ ನಾವು ಕಾಣಬಹುದು. ಇದನ್ನು ಗುಹೆಯ ಒಳಕೋಣೆಯಲ್ಲಿ ಇಡಲಾಗಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಝೂಲ್ ಉತ್ಸವವು ಐಶ್‍ಮುಕಾಮ್ನ ಪ್ರಮುಖ ಆಕರ್ಷಣೆಯಾಗಿದೆ. ಈ ಉತ್ಸವದಲ್ಲಿ ಭಕ್ತಾಧಿಗಳು ಇಲ್ಲಿನ ಸಂತರ ಆಶೀರ್ವಾದವನ್ನು ಸಾರುವ ಪಂಜುಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ.


Click it and Unblock the Notifications