ಪೈಕರ ಕೆರೆಯು ಊಟಿಯಿಂದ 30 ಕಿ.ಮೀ ದೂರದಲ್ಲಿರುವ ಮಧುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿರುವ ಒಂದು ಉತ್ಕೃಷ್ಟವಾದ ಪ್ರಕೃತಿ ವೈಭವವಾಗಿದೆ. ಹಚ್ಚ ಹಸಿರ ಕಾಡುಗಳಿಂದ ಮತ್ತು ಅದೆ ಬಣ್ಣದ ನೀರಿನಿಂದ ಕೂಡಿರುವ ಈ ಕೆರೆಯು ನೋಡುಗರಿಗೆ ಒಂದು ಅದ್ಭುತವಾದ ವಿಹಂಗಮ ನೋಟವನ್ನು ಒದಗಿಸುತ್ತದೆ.
ತೋಡ ಜನಾಂಗದ ಅತ್ಯಂತ ಪವಿತ್ರ ಕೆರೆಯಾಗಿ ಪರಿಗಣಿಸಲ್ಪಟ್ಟಿರುವ ಈ ಕೆರೆಯು,ನೀಲಗಿರಿ ಜಿಲ್ಲೆಯ ಅತ್ಯಂತ ದೊಡ್ಡ ಕೆರೆಯಾಗಿದೆ. ವೆನ್‍ಲಾಕ್ ಡೌನ್ಸ್ ಎಂಬ ಅತಿ ದೊಡ್ಡದಾದ ಮತ್ತು ದಟ್ಟವಾದ ಹುಲ್ಲುಗಾವಲು ಇಲ್ಲಿನ ಅತ್ಯುತ್ತಮ ವಿಹಾರತಾಣವಾಗಿದೆ. ಇದು ಪೈಕರ ಕೆರೆಗೆ ಸಮೀಪದಲ್ಲಿ ನೆಲೆಗೊಂಡಿದೆ. ತಮಿಳುನಾಡು ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಇಲಾಖೆಯು ಈ ಕೆರೆಯಲ್ಲಿ ಒಂದು ಬೋಟ್ ಹೌಸ್ ಅನ್ನು ನಿರ್ವಹಿಸುತ್ತಿದೆ. ಈ ಬೋಟ್ ಹೌಸ್‍ನಲ್ಲಿ ಒಂದು ಉಪಾಹಾರ ಗೃಹ ಸಹ ಇದೆ.
ಪ್ರವಾಸಿಗರು ಇಲ್ಲಿ ದೋಣಿಯಾನವನ್ನು ಕೈಗೊಳ್ಳಬಹುದು. ಇದು ಛಾಯಾಚಿತ್ರಗಳನ್ನು ತೆಗೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ವಿಹಂಗಮ ನೋಟವು ಪ್ರವಾಸಿಗರ ಮನದಲ್ಲಿ ಸದಾ ಹಸಿರಾಗಿ ಉಳಿಯುತ್ತದೆ. ಪೈಕರ ನದಿಯು ಒಂದು ಜಲಾಶಯ ಹಾಗು ಜಲವಿದ್ಯುತ್ ಸ್ಥಾವರವನ್ನು ಹೊಂದಿದೆ. ಇಲ್ಲಿಗೆ ಬೆಳಗ್ಗೆ 8.30 ರಿಂದ ಸಂಜೆ 5.00 ರವರೆಗ್ ಭೇಟಿಕೊಡಬಹುದು.


Click it and Unblock the Notifications