Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಮಕರ ಪೊಂಗಲ್

ಮಕರ ಪೊಂಗಲ್, ಊಟಿ

0

ಮಕರ ಪೊಂಗಲ್ ಹಬ್ಬವು ತಮಿಳುನಾಡಿನಲ್ಲಿ ಭಾರೀ ಶ್ರದ್ಧಾ ಮತ್ತು ಭಕ್ತಿಗಳಿಂದ, ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ಈ ಹಬ್ಬವನ್ನು ಪ್ರತಿವರ್ಷ ಜನವರಿ ಮಧ್ಯ ಭಾಗದಲ್ಲಿ ಆಚರಿಸಲಾಗುತ್ತದೆ. ಜನವರಿ 12 ರಿಂದ 15ನೇ ತಾರೀಖಿನವರೆಗೆ ನಡೆಯುವ ಈ ಹಬ್ಬವು ಈ ರಾಜ್ಯದ ಸುಗ್ಗಿಯ ಹಬ್ಬವಾಗಿದೆ. ವಿಶೇಷವಾಗಿ ಮಕರ ಪೊಂಗಲ್ ದಿನ ರೈತರು  ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಇದರಲ್ಲಿ ಪಾಲ್ಗೋಳ್ಳುತ್ತಾರೆ.

ಈ ಹಬ್ಬವನ್ನು ಆಚರಿಸುವವರಿಗೆ ಸುಖ ಮತ್ತು ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ಊಟಿಯಲ್ಲಿ ಸಹ ಸೂರ್ಯ ದೇವ ಮತ್ತು ವರುಣ ದೇವರಿಗೆ ತಮ್ಮ ಬೆಳೆ ಬೆಳೆಯಲು ನೆರವು ನೀಡಿದ್ದಕ್ಕೆ ಧನ್ಯವಾದಗಳನ್ನು ಹಬ್ಬದ ಮೂಲಕ ಅರ್ಪಿಸುತ್ತಾರೆ. ಇದರ ಜೊತೆಗೆ ತಮ್ಮ ಜಾನುವಾರುಗಳಿಗು ಸಹ ಕೃಷಿಗೆ ಸಹಾಯ ಮಾಡಿದ್ದಕ್ಕೆ ಇವರು ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಎಲ್ಲಾ ಹಿಂದೂಗಳು ತಮ್ಮ ತಮ್ಮ ಮನೆಗಳನ್ನು ಹೂವುಗಳು ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ಹೂವು ಮತ್ತು ಅಕ್ಕಿಯ ಪುಡಿಗಳಿಂದ ರಂಗೋಲಿಯನ್ನು ಅಲಂಕರಿಸುವುದು ಒಂದು ವಿಶೇಷ. ಹಾಲು, ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ತಯಾರಿಸುವ ಪೊಂಗಲ್ ಈ ಹಬ್ಬದ ವಿಶೇಷ ಅಡುಗೆಯಾಗಿರುತ್ತದೆ. ಇದನ್ನು ಮಕರ ಪೊಂಗಲ್ ಎಂದು ಕರೆಯುತ್ತಾರೆ. ಇದು ಈ ಹಬ್ಬದಲ್ಲಿ ಕಡ್ಡಾಯವಾಗಿ ಸೇವಿಸಲೇ ಬೇಕಾದ ತಿಂಡಿಯಾಗಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed