ದೆಹಲಿ ಮತ್ತು ಗುರ್ಗಾಂವ್ ನಗರಗಳಿಗೆ ಪ್ರತಿಸ್ಪರ್ಧೆ ನೀಡುವ ನಿಟ್ಟಿನಲ್ಲಿ ನೊಯ್ಡಾ ಸೆಕ್ಟರ್ 18 ಮಾರ್ಕೆಟ್ ನ್ನು ಅನ್ವೇಷಿಸಿದೆ. ಅತ್ಯಾಧುನಿಕ ಮಾಲ್, ಅದ್ಭುತ ಉಪಹಾರಗೃಹಗಳು, ಕಣ್ಸೆಳೆಯುವ ಮಲ್ಟಿಪ್ಲೆಕ್ಸ್ ಗಳು ಮತ್ತು ಇತರ ಮನೋರಂಜನಾ ಕೇಂದ್ರ ಹಾಗೂ ವ್ಯಾಪಾರ ಕೇಂದ್ರಗಳು ಈ ಮಾರ್ಕೆಟ್ ನಲ್ಲಿ ಬಿಟ್ಟರೆ ರಾಷ್ಟ್ರ ರಾಜಧಾನಿಯ ಪ್ರದೇಶ ಅಥವಾ ದೆಹಲಿಯ ಎನ್ ಸಿಆರ್ ನಲ್ಲಿ ಮಾತ್ರ ಕಾಣಬಹುದಾಗಿದೆ.
ವ್ಯಾಪಾರ ನಡೆಯುವ ಸ್ಥಳ ಮತ್ತು ಪ್ರತಿಷ್ಠಿತ ವ್ಯಾಪಾರ ವಿಳಾಸಗಳಿಗೆ ಈ ಪ್ರದೇಶವು ಒಂದಾಗಿದೆ. ಸಗಟು ವ್ಯಾಪಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಬ್ರಾಂಡ್ ಗಳಿಗೆ ಇದು ನೆಲೆಯಾಗಿದೆ. ಅಡಿಡಾಸ್, ಗೌಟಿಯರ್, ಬ್ಲಾಕ್ಬೆರ್ರಿ, ಇಂಡಿಗೊ ನೇಶನ್, ವ್ಯಾನ್ ಹುಸೇನ್, ಬೆಂಟ್ಲೆ, ಬೆನೆಟನ್, ಕಲರ್ ಪ್ಲಸ್, ಡೊಕರ್ಸ್, ಟೆಕ್ಸನ್, ಲೂಯಿಸ್ ಫಿಲಿಪ್, ರೀಬಾಕ್, ಸಿಟಿ ಲುಕ್, ಎಬೋನಿ, ಲಿಲ್ ಟೊಮೇಟೊ, ಹಾಲ್ಮಾರ್ಕ್ ಮತ್ತು ಲೆವಿಸ್ ಸಹಿತ ಹಲವಾರು ಅಂತಾರಾಷ್ಟ್ರೀಯ ಕಂಪನಿಗಳು ಈ ಮಾರ್ಕೆಟ್ ನಲ್ಲಿ ತಮ್ಮ ಮಳಿಗೆಗಳನ್ನು ತೆರೆದಿದೆ.
ಅರೋಮಾ, ಬರಿಸ್ಟಾ, ಬೊನ್ ಬೊನ್, ಬಾಂಬೂ, ಡೊಮಿನೊಸ್, ಕಥಿಸ್, ನಿರುಲಾಸ್, ಮೆಕ್ ಡೊನಾಲ್ಡ್ಸ್, ಫಾರ್ಚ್ಯೂನ್, ಕುಕೀಸ್, ಪಂಜಾಬಿ ಬೈ ನೇಚರ್ ನಂತಹ ಹಲವಾರು ಜನಪ್ರಿಯ ಬ್ರಾಂಡ್ ಗಳ ಫುಡ್ ಜಾಯಿಂಟ್ ಗಳಿವೆ. ನೊಯ್ಡಾ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಇದು ಜನಪ್ರಿಯ ಹ್ಯಾಂಗ್ ಔಟ್ ತಾಣವಾಗಿದ್ದು, ಕನ್ನಟ್ ಪ್ಲೇಸ್ ಅಥವಾ ದಕ್ಷಿಣ ದೆಹಲಿಯ ಮಾರ್ಕೆಟ್ ಗಿಂತ ಜನರಿಗೆ ಇಲ್ಲಿ ಹೆಚ್ಚಿನ ತೃಪ್ತಿ ಸಿಗುತ್ತದೆ.


Click it and Unblock the Notifications