ಹೆಸರೇ ಸೂಚಿಸುವಂತೆ ಇದು ಶಿರ್ಡಿ ಸಾಯಿ ಬಾಬಾರಿಗೆ ಸಮರ್ಪಿಸಲಾಗಿರುವ ಸಾಯಿ ಬಾಬಾ ಮಂದಿರ ನೊಯ್ಡಾದ ಅತ್ಯಂತ ಪ್ರಸಿದ್ಧ ಹಾಗೂ ಬೃಹತ್ ಮಂದಿರವಾಗಿದೆ. ಈ ಮಂದಿರವೂ ವಾರದ ಪ್ರತೀ ದಿನವೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಸಾಯಿಬಾಬಾರು ಆಶೀರ್ವಾದದಿಂದ ಕೇವಲ ಆರೋಗ್ಯ, ಐಶ್ವರ್ಯ ಮತ್ತು ಸೌಭಾಗ್ಯ ನೀಡುವುದು ಮಾತ್ರವಲ್ಲದೆ, ವಾಸಿಯಾಗದ ರೋಗಗಳನ್ನು ಗುಣಪಡಿಸುವಂತಹ ಶಕ್ತಿಯೂ ಅವರ ಆಶೀರ್ವಾದದಲ್ಲಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಮಂದಿರದಲ್ಲಿ ಧರ್ಮಾರ್ಥ ಔಷಧಾಲಯವಿದ್ದು, ಇದರಲ್ಲಿ ತರಬೇತು ಹೊಂದಿರುವ ವೈದ್ಯರು ಪ್ರತೀದಿನ ಸುಮಾರು ನೂರಕ್ಕೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಮಂದಿರದಲ್ಲಿ ಪ್ರತೀ ದಿನ ಅರ್ಹ ಮಕ್ಕಳಿಗೆ ಉಚಿತ ಮಧ್ಯಾಹ್ನದ ಊಟವಿದೆ.
ಇಲ್ಲಿಗೆ ಬರುವ ಭಕ್ತರು ದಿನಾಲೂ ನಡೆಯುವ ಪೂಜೆ, ಆರಾಧನೆ, ಅರ್ಚನೆ ಮತ್ತು ಹೋಮ-ಹವನಗಳಿಂದ ಮನಃಶಾಂತಿ ಮತ್ತು ಪ್ರಶಾಂತತೆಯನ್ನು ಅನುಭವಿಸುತ್ತಾರೆ. ಸಾಯಿ ಬಾಬಾ ಮಂದಿರ ಸಮಿತಿ ಸಾಯಿ ಬಾಬಾ ಮಂದಿರದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಈ ಸಮಿತಿಯ ಅಧೀನದಲ್ಲಿ ರಾಷ್ಟ್ರದ ಇತರೆಡೆಗಳಲ್ಲಿ ಕೂಡ ಸಾಯಿಬಾಬಾ ಮಂದಿರವಿದೆ.


Click it and Unblock the Notifications