ಕುರ್ಮಬಲಂಗೋಡ್ ಹಳ್ಳಿಯಲ್ಲಿ ಅಡ್ಯಾನ್ ಪಾರಾ ಫಾಲ್ಸ್ ಇದೆ. ಪ್ರವಾಸಿಗರನ್ನು ಮತ್ತು ನಿಸರ್ಗ ಪ್ರೇಮಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಭವ್ಯವಾದ ಜಲಪಾತ ಇದಾಗಿದೆ. ನಿಲಂಬೂರ್ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದ್ದು, ನಿಲಂಬೂರ್-ಊಟಿ ಹೆದ್ದಾರಿಯ ಮೂಲಕ ತಲುಪಬಹುದು. ಉತ್ತಮ ನೈಸರ್ಗಿಕ ಪರಿಸರ, ಸಮೃದ್ಧ ಹಸಿರು ಮತ್ತು ಬೃಹತ್ ಬಂಡೆಗಳ ತಾಣವಾಗಿದೆ. ಜಲಪಾತದ ನಂತರ ಬಂಡೆಗಳ ಮೂಲಕ ಹಾದು ಹೋಗುವ ನೀರು ಚಿಕ್ಕ ಕೆರೆಯ ಹಾಗೆ ನೀರು ಸಂಗ್ರಹಗೊಳ್ಳುತ್ತದೆ, ಪ್ರವಾಸಿಗರು ತಂಪಾದ ನೀರಿನಲ್ಲಿ ಸ್ನಾನ ಮಾಡಬಹುದು.
ಈ ನೀರು ವೆಲ್ಲೆರಿಮಲಾ ಎನ್ನುವ ಪ್ರಖ್ಯಾತ ಪರ್ವತ ಶ್ರೇಣಿಯ ಮೂಲಕ ಹಾದು ಚಲಿಯಾರ್ ನದಿಯನ್ನು ಸೇರಿಕೊಳ್ಳುತ್ತದೆ. ಈ ಜಲಪಾತ ಸುಮಾರು 300 ಅಡಿ ಎತ್ತರದಿಂದ ಧುಮುಕುತ್ತದೆ. ಎತ್ತರದಿಂದ ಧುಮ್ಮಿಕ್ಕುವ ನೀರಿನ ಸದ್ದು ಕೇಳುವುದೇ ಅಮೋಘವಾಗಿರುತ್ತದೆ. ಇದರ ಸುತ್ತಲು ನಿತ್ಯಹರಿದ್ವರ್ಣದ ಕಾಡು ಆವೃತವಾಗಿದ್ದು, ಚಿತ್ರಸದೃಶ ನೋಟವನ್ನು ಒದಗಿಸುತ್ತದೆ ಹಾಗೂ ಒಂದು ದಿನದ ಕುಟುಂಬ ಪ್ರವಾಸಕ್ಕೆ ಪರಿಪೂರ್ಣ ಸ್ಥಳವಾಗಿದೆ.


Click it and Unblock the Notifications