ಪ್ರಯಾಣದ ಜೊತೆ ಜೊತೆಗೆ, ಪ್ರತಿಯೊಬ್ಬರೂ ಪ್ರಪಂಚದ ಪ್ರತಿಯೊಂದು ರುಚಿಯನ್ನು ಸವಿಯಲು ಬಯಸುತ್ತಾರೆ. ಆದರೆ ಹಾಗೆ ಮಾಡುವುದು ನಮಗೆಲ್ಲಾ ಅಸಾಧ್ಯ ಬಿಡಿ ಅಂದುಕೊಳ್ಳುವರಿಗೆ ಭಾರತದ 2 ರೆಸ್ಟೋರೆಂಟ್ ಅನ್ನು ಪರಿಚಯಿಸಲಿದ್ದೇವೆ. ಇವು ವಿಶ್ವದ ಟಾಪ್ 100 ರೆಸ್ಟೋರೆಂಟ್‌ಗಳಲ್ಲಿ ಸ್ಥಾನ ಪಡೆದಿವೆ.
ಅಂದಹಾಗೆ ಈ ರೆಸ್ಟೋರೆಂಟ್‌ಗಳ ವಿಶೇಷತೆ ಏನು?, ಇವು ಎಲ್ಲಿವೆ?, ನಮ್ಮ ಬಜೆಟ್‌ಗೆ ಸರಿಹೋಗುತ್ತದೆಯೇ? ಎಂಬೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ವಿಶೇಷವೆಂದರೆ ಒಮ್ಮೆ ಈ ರೆಸ್ಟೋರೆಂಟ್ ನಲ್ಲಿ ಆಹಾರ ಸವಿದವರು ಮತ್ತೆ ಮತ್ತೆ ಹುಡುಕಿಕೊಂಡು ಹೋಗುವುದಂತೂ ಖಚಿತ. ಅಷ್ಟೇ ಅಲ್ಲ, ಬಹಳ ಸಂತೋಷದಿಂದ ಕೂಡಿರುತ್ತದೆ ನಿಮ್ಮ ಮನಸ್ಸು. ಮತ್ತೇಕೆ ತಡ ಒಮ್ಮೆ ಆ ರೆಸ್ಟೋರೆಂಟ್‌ಗಳ ಬಗ್ಗೆ ತಿಳಿದುಕೊಳ್ಳೋಣ...
ಇವೇ ನೋಡಿ ಆ ರೆಸ್ಟೋರೆಂಟ್‌ಗಳು
ಜಗತ್ತಿನ ಯಾವ ಮೂಲೆಯಲ್ಲಿ ವಾಸಿಸುತ್ತಿದ್ದರೂ ಜೀವನದಲ್ಲಿ ಒಮ್ಮೆಯಾದರೂ ಭಾರತೀಯ ರುಚಿಯನ್ನು ನಾಲಿಗೆಯ ಬಾಗಿಲಿಗೆ ತರಲು ಬಯಸುತ್ತಾರೆ ಜನರು. ಅದು ದಕ್ಷಿಣ ಭಾರತದ ಇಡ್ಲಿಯಾಗಿರಲಿ ಅಥವಾ ಉತ್ತರ ಭಾರತದ ಕಬಾಬ್ ಆಗಿರಲಿ, ಭಕ್ಷ್ಯದ ಪ್ರತಿಯೊಂದು ರುಚಿಯು ಭಾರತೀಯ ಅಡುಗೆಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಮಾಧ್ಯಮ ಕಂಪನಿ ವಿಲಿಯಂ ರೀಡ್ ಇತ್ತೀಚೆಗೆ ವಿಶ್ವದ ಟಾಪ್ 100 ರೆಸ್ಟೋರೆಂಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಭಾರತದ ಎರಡು ರೆಸ್ಟೋರೆಂಟ್‌ಗಳು ಸಹ ಸೇರಿವೆ. ಇವುಗಳಲ್ಲಿ ಮೊದಲ ಹೆಸರು ಮುಂಬೈನ ಮಾಸ್ಕ್ ರೆಸ್ಟೋರೆಂಟ್ ಮತ್ತು ಎರಡನೇ ಹೆಸರು ದೆಹಲಿಯ ಇಂಡಿಯನ್ ಆಕ್ಸೆಂಟ್ ರೆಸ್ಟೋರೆಂಟ್.

ಮಾಸ್ಕ್ ರೆಸ್ಟೋರೆಂಟ್‌ನ ವಿಶೇಷತೆ ಏನು?
ಮುಂಬೈನ ಮಾಸ್ಕ್ ರೆಸ್ಟೋರೆಂಟ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಪ್ರತೀಕ್ ಸಾಧು ಮತ್ತು ಅದಿತಿ ದುಗರ್ 2016 ರಲ್ಲಿ ಮುಂಬೈನಲ್ಲಿ ಮಾಸ್ಕ್ ರೆಸ್ಟೋರೆಂಟ್ ಅನ್ನು ತೆರೆದಿದ್ದರು ಎಂಬುದು ಗಮನಾರ್ಹ. ಇನ್ನು 2024 ರಲ್ಲಿ ಏಷ್ಯಾದ ಟಾಪ್-50 ರೆಸ್ಟೋರೆಂಟ್‌ಗಳ ಕುರಿತು ಮಾತನಾಡುವುದಾದರೆ ಮುಖ್ಯ ಬಾಣಸಿಗ ವರುಣ್ ಟೋಟ್ಲಾನಿ ನಡೆಸುತ್ತಿರುವ ಮಾಸ್ಕ್ 23 ನೇ ಸ್ಥಾನವನ್ನು ಪಡೆದುಕೊಂಡಿದೆ. 2023 ರ ಟಾಪ್-50 ಏಷ್ಯನ್ ರೆಸ್ಟೋರೆಂಟ್‌ಗಳಲ್ಲಿ ಮುಂಬೈ ಮಾಸ್ಕ್‌ನ ಹೆಸರನ್ನು ಸೇರಿಸಲಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಅದಿತಿ ಈ ರೆಸ್ಟೋರೆಂಟ್‌ನ ನಿರ್ದೇಶಕಿ ಮತ್ತು ಸಂಸ್ಥಾಪಕಿ.
ದೇಶದ ಉತ್ಪನ್ನಗಳ ಶ್ರೀಮಂತಿಕೆಯನ್ನು ತೋರಿಸುವುದು ಮಾಸ್ಕ್ ರೆಸ್ಟೋರೆಂಟ್‌ನ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳುತ್ತದೆ. ಇಲ್ಲಿನ ಮೆನುವು 10-ಕೋರ್ಸುಗಳನ್ನು ಹೊಂದಿದೆ ಮತ್ತು ಅದರಲ್ಲಿ ಸ್ಥಳೀಯ ಪದಾರ್ಥಗಳನ್ನು ಮಾತ್ರ ಬಳಸಲಾಗುತ್ತದೆ, ಇದರಿಂದ ಸ್ಥಳೀಯ ರೈತರು ಮತ್ತು ವ್ಯಾಪಾರಿಗಳು ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ, ಇಲ್ಲಿ ನೀಡಲಾಗುವ ಆಹಾರವು ಮಹಾರಾಷ್ಟ್ರ ಮಾತ್ರವಲ್ಲದೆ ಇಡೀ ಭಾರತದ ಆಹಾರದಲ್ಲಿನ ವೈವಿಧ್ಯತೆಯನ್ನು ತೋರಿಸುತ್ತದೆ.

ಮಕ್ಕೈ ಮಾತ್ರಿ
ಮುಂಬೈನ ಓಲ್ಡ್ ಟೆಕ್ಸ್ಟೈಲ್ ಮಿಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಮಾಸ್ಕ್, ಅದರ 10 ಕೋರ್ಸ್ ಟೇಸ್ಟಿಂಗ್ ಮೆನುಗೆ ಬಹಳ ಪ್ರಸಿದ್ಧವಾಗಿದೆ, ಇದರ ಬೆಲೆ ಸುಮಾರು 5200 ರೂ. ಇದು ಭಾರತದಲ್ಲಿ ಈ ರೀತಿಯ ಮೊದಲ ರೆಸ್ಟೋರೆಂಟ್ ಎಂದು ಹೇಳಲಾಗುತ್ತದೆ. ಈ ರೆಸ್ಟೋರೆಂಟ್‌ನಲ್ಲಿ ಮಕ್ಕೈ ಮಾತ್ರಿಯನ್ನು ಚಟ್ನಿ ಮತ್ತು ಹುರಿದ ಜೋಳದೊಂದಿಗೆ ಬಡಿಸಲಾಗುತ್ತದೆ. ಜೋಳ ಮತ್ತು ಸೆಣಬಿನ ಬೀಜಗಳನ್ನು ಬೆರೆಸಿ ಈ ಮಾತ್ರಿಯನ್ನು ತಯಾರಿಸಲಾಗುತ್ತದೆ. ಇದಲ್ಲದೆ, ಆಯುರ್ವೇದ ಪಾಕವಿಧಾನಗಳಿಂದ ತಯಾರಿಸಿದ ಕಾಕ್‌ಟೇಲ್‌ಗಳು ಸಹ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಪ್ರಸಿದ್ಧವಾಗಿವೆ.

ಇಂಡಿಯನ್ ಆಕ್ಸೆಂಟ್ ರೆಸ್ಟೋರೆಂಟ್ ಸ್ಪೆಷಲ್
2009 ರಲ್ಲಿ ದೆಹಲಿಯಲ್ಲಿ ಪ್ರಾರಂಭವಾದ ಇಂಡಿಯನ್ ಆಕ್ಸೆಂಟ್ ರೆಸ್ಟೋರೆಂಟ್ ಅನ್ನು ರೋಹಿತ್ ಖಟ್ಟರ್ ಪ್ರಾರಂಭಿಸಿದರು. ಈ ರೆಸ್ಟೋರೆಂಟ್ 2015 ರಿಂದ 2021 ರವರೆಗೆ ಸತತ ಏಳು ವರ್ಷಗಳ ಕಾಲ ಭಾರತದ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಸ್ಥಾನ ಪಡೆದಿದೆ. ವಿಶೇಷವೆಂದರೆ ಈ ರೆಸ್ಟೋರೆಂಟ್ ಲಂಡನ್ ಮತ್ತು ನ್ಯೂಯಾರ್ಕ್ ನಲ್ಲೂ ಮಳಿಗೆಗಳನ್ನು ಹೊಂದಿದೆ. ಈ ರೆಸ್ಟೊರೆಂಟ್‌ನಲ್ಲಿರುವ ಅಗ್ಗದ ಖಾದ್ಯವು ಸುಮಾರು 4,000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.
ದೆಹಲಿಯಲ್ಲಿರುವ ಇಂಡಿಯನ್ ಆಕ್ಸೆಂಟ್‌ನ ಸಂಸ್ಥಾಪಕ ಬಾಣಸಿಗ ಮನೀಶ್ ಈ ಯಶಸ್ಸಿನ ಹಿಂದೆ ಇದ್ದಾರೆ. ಇದು ಈಗ 2024 ರ ಏಷ್ಯಾದ 50 ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ 26 ನೇ ಸ್ಥಾನದಲ್ಲಿದೆ. ಈ ರೆಸ್ಟೋರೆಂಟ್‌ನಲ್ಲಿ ಭಾರತೀಯ ಸಮಕಾಲೀನ ಪಾಕಪದ್ಧತಿಯ ಗುಣಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಸೃಜನಾತ್ಮಕ, ಆಧುನಿಕ ತಿನಿಸು ಮತ್ತು ಗ್ರಾಹಕರಿಗೆ ಉತ್ತಮ ಸೇವೆಯನ್ನು ಇಲ್ಲಿ ಒದಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದಲ್ಲದೇ, ಚೆಫ್ ಮನೀಶ್ ಮೆಹ್ರೋತ್ರಾ ಅವರು ಬಡಿಸುವ ಆಹಾರವು ಅವರ ಸ್ವಂತ ಆವಿಷ್ಕಾರವಾಗಿದೆ.


Click it and Unblock the Notifications















