Search
  • Follow NativePlanet
Share
» » ಸೌತ್ ಇಂಡಿಯಾ ಟೂರ್ ಮಾಡಲು ಭಾರತ್ ಗೌರವ್ ರೈಲಿನಲ್ಲಿ ಪ್ರಯಾಣಿಸಿ.. LTC ಮತ್ತು EMI ಸೌಲಭ್ಯ ಲಭ್ಯ

ಸೌತ್ ಇಂಡಿಯಾ ಟೂರ್ ಮಾಡಲು ಭಾರತ್ ಗೌರವ್ ರೈಲಿನಲ್ಲಿ ಪ್ರಯಾಣಿಸಿ.. LTC ಮತ್ತು EMI ಸೌಲಭ್ಯ ಲಭ್ಯ

ದಕ್ಷಿಣ ಭಾರತ ಪ್ರವಾಸ ಮಾಡಬೇಕೆಂದು ಪ್ಲಾನ್‌ ಮಾಡುತ್ತಿರುವ ಮಂದಿಗೆ ಒಂದು ಗುಡ್‌ ನ್ಯೂಸ್‌ ಇದೆ. ಅದೇನಪ್ಪಾ ಅಂತೀರಾ?, ಭಾರತೀಯ ರೈಲ್ವೆ ಅತ್ಯುತ್ತಮ ಮತ್ತು ಕೈಗೆಟುಕುವ ಪ್ರವಾಸ ವ್ಯಾಕೇಜ್ ಅನ್ನು ಪ್ರಾರಂಭಿಸಿದೆ. ಎಲ್ಲರಿಗೂ ತಿಳಿದಿರುವಂತೆ ಐರ್‌ಸಿಟಿಸಿ ಭಾರತ್ ಗೌರವ್ ರೈಲಿನ ಮೂಲಕ ಕಾಲಕಾಲಕ್ಕೆ ಪ್ರವಾಸಗಳನ್ನು ಆಯೋಜಿಸುತ್ತಿದೆ. ಈ ಬಾರಿ ಭಾರತ್ ಗೌರವ್ ಸೌತ್ ಇಂಡಿಯಾ ಟೂರ್ ಅಡಿಯಲ್ಲಿ ಪ್ರವಾಸಿಗರನ್ನು ಗೋರಖ್ ಪುರ ರೈಲು ನಿಲ್ದಾಣದಿಂದ ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ದಕ್ಷಿಣ ಭಾರತಕ್ಕೆ ಕರೆದೊಯ್ಯಲಾಗುತ್ತದೆ. ಹೌದು, ಭಾರತ್ ಗೌರವ್ ಪ್ರವಾಸಿ ರೈಲಿನ ಮೂಲಕ ಪ್ರವಾಸಿಗರು ಈ ಪ್ರಯಾಣವನ್ನು ಕೈಗೊಳ್ಳಬಹುದು.

ಏನೆಲ್ಲಾ ನೋಡಬಹುದು?

ರಾಮೇಶ್ವರಂ: ರಾಮೇಶ್ವರಂ ತಮಿಳುನಾಡಿನ ಒಂದು ಸುಂದರ ದ್ವೀಪದಲ್ಲಿದೆ. ಹಿಂದೂ ಪುರಾಣಗಳ ಪ್ರಕಾರ, ಶ್ರೀರಾಮ ಶ್ರೀಲಂಕಾಕ್ಕೆ ಸಮುದ್ರಕ್ಕೆ ಅಡ್ಡಲಾಗಿ ಸೇತುವೆಯನ್ನು ರಚಿಸಿದ ಸ್ಥಳವಾಗಿದೆ. ರಾಮೇಶ್ವರಂ ವರ್ಷಪೂರ್ತಿ ಭೇಟಿ ನೀಡಬಹುದಾದ ತಾಣವು ಹೌದು.

meenakshitemple

ಮೀನಾಕ್ಷಿ ದೇವಸ್ಥಾನ (ಮದುರೈ): ಐತಿಹಾಸಿಕ ಮೀನಾಕ್ಷಿ ಅಮ್ಮನ ದೇವಸ್ಥಾನವು ತಮಿಳುನಾಡಿನ ಮಧುರೈನ ವೈಗೈ ನದಿಯ ದಕ್ಷಿಣ ದಡದಲ್ಲಿದೆ. 1623 ಮತ್ತು 1655 ರ ನಡುವೆ ನಿರ್ಮಿಸಲಾದ ಈ ಸ್ಥಳದ ಅದ್ಭುತ ವಾಸ್ತುಶಿಲ್ಪವು ಜಾಗತಿಕವಾಗಿ ಪ್ರಸಿದ್ಧವಾಗಿದೆ. ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ.

ಕನ್ಯಾಕುಮಾರಿ: ಕನ್ಯಾಕುಮಾರಿ ತಮಿಳುನಾಡು ರಾಜ್ಯದ ಒಂದು ಆಕರ್ಷಕ ಕರಾವಳಿ ಪಟ್ಟಣವಾಗಿದೆ. ಕೇಪ್ ಕೊಮೊರಿನ್ ಎಂದೂ ಕರೆಯಲ್ಪಡುವ ಈ ಪಟ್ಟಣವು ಭಾರತೀಯ ಪುರಾಣ ಮತ್ತು ಜಾನಪದ ಕಥೆಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಕನ್ಯಾಕುಮಾರಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್.

ತಿರುಪತಿ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿಯು ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಪಂಚದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ತಿರುಪತಿ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ ಮತ್ತು ಅನೇಕ ಪ್ರಾಚೀನ ವೇದಗಳು ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

tirupati

ಮಲ್ಲಿಕಾರ್ಜುನ ಜ್ಯೋತಿರ್ಲಿಂಗ: 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ, ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರಪ್ರದೇಶದ ಹೈದರಾಬಾದ್‌ನಿಂದ 215 ಕಿಲೋಮೀಟರ್ ದೂರದಲ್ಲಿರುವ ನಲ್ಲಮಲೈ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಶಿವನ ದೈವಿಕ ಕ್ಷೇತ್ರವಾಗಿದೆ. ಇದನ್ನು ದಕ್ಷಿಣದ ಕಾಶಿ ಎಂದೂ ಕರೆಯುತ್ತಾರೆ.

ರೈಲನ್ನು ಹತ್ತಲು/ಬಿಡುವ ಸ್ಥಳಗಳು

ವರ್ಗವಾರು ಬರ್ತ್‌ಗಳ ಒಟ್ಟು ಸಂಖ್ಯೆ 767. ಇದರಲ್ಲಿ 02 ಎಸಿ (ಒಟ್ಟು 49 ಅಸನಗಳು), 03 ಎಸಿ (ಒಟ್ಟು 70 ಆಸನಗಳು) ಮತ್ತು ಸ್ಲೀಪರ್ (ಒಟ್ಟು 648 ಅಸನಗಳು) ಲಭ್ಯವಿರುತ್ತವೆ. ರೈಲನ್ನು ಹತ್ತಲು/ಬಿಡುವ ಸ್ಥಳಗಳೆಂದರೆ ಗೋರಖ್ಪುರ, ಕಪ್ತಂಗಂಜ್, ಥಾವೆ, ಸಿವಾನ್, ಛಾಪ್ರಾ, ಬನಾರಸ್, ಪ್ರಯಾಗ್ರಾಜ್, ಪ್ರತಾಪ್‌ಗಢ, ರಾಯ್ ಬರೇಲಿ, ಲಕ್ಷ್ಮೀ, ಕಾನ್ಸುರ್‌, ಓರೈ, ವೀರಾಂಗನಾ ಲಕ್ಷ್ಮೀಬಾಯಿ, ಲಲಿತ್‌ ಪುರ ಮತ್ತು ಬಿನಾ.
ಪ್ರಯಾಣ ದರ ಎಷ್ಟು?

kanyakumari

02 AC, 03 AC ಮತ್ತು ಸ್ವೀಪರ್ ವರ್ಗದ ಪ್ರಯಾಣ ಪ್ಯಾಕೇಜ್‌ನಲ್ಲಿ ಲಭ್ಯವಿರುತ್ತದೆ. ಹಾಗೆಯೇ ಉಪಹಾರ ಮತ್ತು ಸಸ್ಯಾಹಾರಿ ಊಟ ಮತ್ತು ರಾತ್ರಿಯ ಊಟ, AC/Non AC ಬಸ್‌ಗಳ ಸ್ಥಳೀಯ ಪ್ರವಾಸವನ್ನು ಒಳಗೊಂಡಿರುತ್ತದೆ.

ಸ್ವೀಪರ್ ಕ್ಲಾಸ್‌: ಸ್ವೀಪರ್ (ಎಕಾನಮಿ) ಕ್ಲಾಸ್‌ನಲ್ಲಿ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ ರೂ 24,450/- ಮತ್ತು ಪ್ರತಿ ಮಕ್ಕಳಿಗೆ (5-11 ವರ್ಷಗಳು) 23,000/-. ಈ ಪ್ಯಾಕೇಜ್‌ನಲ್ಲಿ ಸ್ವೀಪರ್‌ ಕ್ಲಾಸ್ ರೈಲು ಪ್ರಯಾಣ, ಎಸಿ ಅಲ್ಲದ ಹೋಟೆಲ್‌ಗಳಲ್ಲಿ ಡಬಲ್‌/ಟ್ರಿಪಲ್‌ ರೂಂನಲ್ಲಿ ತಂಗುವುದು, ಸ್ನಾನ ಮಾಡಲು ಮತ್ತು ಬಟ್ಟೆ ಬದಲಾಯಿಸಲು ಜೊತೆಗೆ ನಾನ್‌ ಎಸಿ ಸಾರಿಗೆ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.

3AC ಕ್ಲಾಸ್: 3AC ಕ್ಲಾಸ್ (ಸ್ಟ್ಯಾಂಡರ್ಡ್ ಕ್ಲಾಸ್) ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ ರೂ 40,850/- ಮತ್ತು ಮಕ್ಕಳಿಗೆ (5-11 ವರ್ಷಗಳು) 39,150/-. ಆಗಿದೆ. ಇದರಲ್ಲಿ 3 ಎಸಿ ದರ್ಜೆಯ ರೈಲು ಪ್ರಯಾಣಕ್ಕೆ ವ್ಯವಸ್ಥೆ ಇರುತ್ತದೆ, ಡಬಲ್/ಟ್ರಿಪಲ್‌ ರೂಮ್‌ಗಳಲ್ಲಿ ಎಸಿ ಹೋಟೆಲ್‌ಗಳಲ್ಲಿ ತಂಗುವುದು, ಬಟ್ಟೆ ಬದಲಾಯಿಸುವುದು ಮತ್ತು ಸ್ನಾನ ಮಾಡುವ ವ್ಯವಸ್ಥೆಯು ಒಳಗೊಂಡಿರುತ್ತದೆ. ಜೊತೆಗೆ ಸಾರಿಗೆ ವ್ಯವಸ್ಥೆ ಲಭ್ಯವಿದೆ.

2 AC ವರ್ಗ: 2 AC (ಕಂಫರ್ಟ್) ಕ್ಲಾಸ್‌ನಲ್ಲಿ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 54,200/- ಮತ್ತು ಮಕ್ಕಳಿಗೆ (5-11 ವರ್ಷಗಳು) 52,150/-, ಇದರಲ್ಲಿ 2AC ವರ್ಗದ ರೈಲು ಪ್ರಯಾಣ, ಎಸಿ ಹೋಟೆಲ್‌ಗಳಲ್ಲಿ ಡಬಲ್/ಟ್ರಿಪಲ್‌ನಲ್ಲಿ ತಂಗಲು, ವಾಶಿಂಗ್ ಮತ್ತು ಬಟ್ಟೆ ಬದಲಾವಣೆಗೆ ವ್ಯವಸ್ಥೆ ಇರುತ್ತದೆ.

rameshwaram

LTC ಮತ್ತು EMI ಸೌಲಭ್ಯ

ಈ ಬಗ್ಗೆ ಮಾಹಿತಿ ನೀಡುವಾಗ, ಐಆರ್‌ಸಿಟಿಸಿ ಉತ್ತರ ಪ್ರದೇಶದ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಜಿತ್ ಕುಮಾರ್ ಸಿನ್ಹಾ ಅವರು ಈ ಪ್ರವಾಸದ ಪ್ಯಾಕೇಜ್‌ನಲ್ಲಿ LTC (Leave Travel Concession) ಮತ್ತು EMI (ತಿಂಗಳಿಗೆ ರೂ. 1185/- ರಿಂದ ಪ್ರಾರಂಭವಾಗುತ್ತದೆ) ಸೌಲಭ್ಯವೂ ಲಭ್ಯವಿದೆ ಎಂದು ಹೇಳಿದ್ದಾರೆ. IRCTC ಪೋರ್ಟಲ್‌ನಲ್ಲಿ ಲಭ್ಯವಿರುವ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್‌ಗಳಿಂದ EMI ಸೌಲಭ್ಯವನ್ನು ಪಡೆಯಬಹುದು. ಈ ಪ್ಯಾಕೇಜ್‌ನ ಬುಕಿಂಗ್ ಅನ್ನು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ

ಪ್ರಯಾಣವನ್ನು ಕಾಯ್ದಿರಿಸಲು IRCTC ವೆಬ್‌ಸೈಟ್ www.rctctourism.com ನಿಂದ ಆನ್‌ಲೈನ್ ಬುಕಿಂಗ್ ಅನ್ನು ಸಹ ಮಾಡಬಹುದು. ಈ ಪ್ರವಾಸದ ಪ್ಯಾಕೇಜ್ ಕೋಡ್ NZBG-40 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಬುಕಿಂಗ್‌ ಗಾಗಿ ನೀವು ಕೆಳಗೆ ನೀಡಲಾದ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು, ಲಕ್ನೋ 9506890926, 8708785824, 8445137807, 7988676189, 8287930913.

More News

Read more about: irctc travel ticket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+