ರೋಝಾ ಶರೀಫ್ ಮಂಡಲಿಯನ್ನು ಮುಸಲ್ಮಾನ ಸಂತ ಗೊಸ್ಪಾಲ್‍ರವರ ಎಂಟು ಜನ ಗಂಡು ಮಕ್ಕಳಲ್ಲಿ ಒಬ್ಬರಾದ ಬಾಬಾ ಅಬ್ದುಲ್ಲಾ ಶಹ್ ಕದ್ರಿಯವರ ಗೌರವಾರ್ಥವಾಗಿ ನಿರ್ಮಿಸಲಾಯಿತು. ಇದು ಮಂಡಲಿ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇಲ್ಲಿಗೆ ಹತ್ತಿರದ ರೈಲು ನಿಲ್ದಾಣಕ್ಕೆ ಇವರ ಹೆಸರನ್ನೆ ಇಡಲಾಗಿದ್ದು, "ಬಾಬಾ ಅಬ್ಧುಲ್ಲಾ ಶಾ ಕದ್ರಿ ರೈಲು ನಿಲ್ದಾಣ ಕುಲ್ಥಾಮ್ " ಎಂದು ಕರೆಯಲಾಗುತ್ತಿದೆ. ಈ ಯಾತ್ರಾಸ್ಥಳದಲ್ಲಿ ನಡೆಯುವ ವಾರ್ಷಿಕ ಜಾತ್ರೆಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಜಾತ್ರೆಯು ಇಲ್ಲಿನ ಮಿಶ್ರ ಸಂಸ್ಕೃತಿಯನ್ನು ಕಾಣಲು ಮತ್ತು ಅದರ ಸಾರವನ್ನು ಅನುಭವಿಸಲು ಹೇಳಿ ಮಾಡಿಸಿದ ಸಮಯವಾಗಿದೆ.


Click it and Unblock the Notifications