Search
  • Follow NativePlanet
Share
ಮುಖಪುಟ » ಸ್ಥಳಗಳು » ನವಾನಶಹರ್ » ಹವಾಮಾನ

ನವಾನಶಹರ್ ಹವಾಮಾನ

ನವಾನ್‍ಶಹರಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿಯು ಪ್ರಶಸ್ತವಾಗಿರುತ್ತದೆ. ಆಗ ಇಲ್ಲಿನ ಹವಾಮಾನ ಆಹ್ಲಾದಕರವಾಗಿರುತ್ತದೆ. ಜೊತೆಗೆ ಸುತ್ತ ಮುತ್ತ ನಡೆಯುವ ಜಾತ್ರೆಗಳು ನೋಡುಗರ ಮನಸೂರೆಗೊಳ್ಳುತ್ತವೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್) ; ಬೇಸಿಗೆಕಾಲವು ನವಾನಶಹರದಲ್ಲಿ ಮಾರ್ಚ್ ನಿಂದ ಜೂನ್‍ವರೆಗೆ ಇರುತ್ತದೆ. ಆಗ ಇಲ್ಲಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶಗಳು ಕ್ರಮವಾಗಿ 45° ಸೆಲ್ಶಿಯಸ್ ಮತ್ತು 32° ಸೆಲ್ಶಿಯಸ್ ಇರುತ್ತದೆ. ಇಲ್ಲಿನ ಬೇಸಿಗೆಯ ದಿನಗಳು ಒಣ ಹವೆಯಿಂದ ಕೂಡಿರುತ್ತವೆ. ಈ ಸಮಯದಲ್ಲಿ ಆಗಾಗ ಧೂಳಿನ ಮಾರುತಗಳು ಸಹ ಬೀಸುತ್ತಿರುತ್ತವೆ.

ಮಳೆಗಾಲ

 (ಜುಲೈನಿಂದ ಸೆಪ್ಟೆಂಬರ್):  ಮಳೆಗಾಲವು ಇಲ್ಲಿ ಜುಲೈನಲ್ಲಿ ಆರಂಭವಾಗಿ ಸೆಪ್ಟೆಂಬರಿನವರೆಗೆ ಇರುತ್ತದೆ. ಈ ಮಳೆಗಾಲವು ಸುಡುವ ಬೇಸಿಗೆಯಿಂದ ಸ್ವಲ್ಪ ಮಟ್ಟಿಗೆ ಆರಾಮವನ್ನು ತಂದುಕೊಡುತದೆ. ನವಾನಶಹರ್ ನಲ್ಲಿ ಬೀಳುವ ಮಳೆಯ ಶೇ.70 ರಷ್ಟು ಭಾಗ ಜುಲೈನಲ್ಲಿಯೇ ಬೀಳುತ್ತದೆ.

ಚಳಿಗಾಲ

(ಅಕ್ಟೊಬರ್ ನಿಂದ ಫೆಬ್ರವರಿ): ನವಾನಶಹರ್ ಕೊರೆಯುವ ಚಳಿಗಾಲದ ಅನುಭವವನ್ನು ನೀಡುತ್ತದೆ. ಆಗ ಇಲ್ಲಿನ ಉಷ್ಣಾಂಶವು 12° ಸೆಲ್ಶಿಯಸ್‍ನಿಂದ 20° ಸೆಲ್ಶಿಯಸ್‍ವರೆಗೆ ಇರುತ್ತದೆ. ಚಳಿಗಾಲವು ಇಲ್ಲಿ ಅಕ್ಟೋಬರಿನಲ್ಲಿ ಆರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಜನವರಿ ತಿಂಗಳು ಇಲ್ಲಿ ಅತ್ಯಧಿಕ ಚಳಿಯಿಂದ ಕೂಡಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 6° ಸೆಲ್ಶಿಯಸ್‍ನಷ್ಟು ಕುಸಿದಿರುತ್ತದೆ.