ಗುರುದ್ವಾರ ಶಹೀದ್‍ಗಂಜ್ ತಲ್‍ವಂಡಿ ಜಟ್ಟನ್ ಅನ್ನು ಸುಬೇದಾರ್ ಶಮಸ್ ಖಾನ್ ವಿರುದ್ಧ ನಡೆದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಲು ನಿರ್ಮಿಸಲಾಯಿತು. ಸುಬೇದಾರ್ ಶಮಸ್ ಖಾನ್ ಬೆಹ್ರಾಂನಿಂದ ಒಂದು ಹುಡುಗಿಯನ್ನು ಅಪಹರಿಸಿಕೊಂಡು ಹೋದಾಗ ಗೊಡ್ರಿಯ ಸಿಂಗ್, ಲೊಡ್ರಿಯ ಸಿಂಗ್ ಮತ್ತು ರೂಪ್ ಕೌರ್ ಎಂಬುವರು ಆ ಹುಡುಗಿಯನ್ನು ರಕ್ಷಿಸಲು ಹೋರಾಡಿದ್ದರು. ಆಗ ನಡೆದ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವರನ್ನು ಇಲ್ಲಿ ಸಮಾಧಿ ಮಾಡಲಾಯಿತು. ಈ ಗುರುದ್ವಾರವನ್ನು ಅದೇ ರುದ್ರಭೂಮಿಯಲ್ಲಿ ನಿರ್ಮಿಸಲಾಗಿದೆ. ಸಿಖ್ ಧರ್ಮ ಗುರುಗಳ ಜಯಂತಿಯಂದು ಇಲ್ಲಿ ಅನೇಕ ಬಗೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಜಯಂತಿಗಳು ದೇಶದ ಮೂಲೆ ಮೂಲೆಗಳಿಂದ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ಈ ಗುರುದ್ವಾರವು ರಹೊನ್ ರೈಲು ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿದೆ.


Click it and Unblock the Notifications