ರೇಣುಕಾ ಕೆರೆ, ನಹಾನ್

ನಹಾನ್ ನಿಂದ 40 ಕಿ.ಮೀ ದೂರದಲ್ಲಿರುವ ರೇಣುಕಾ ಕೆರೆ ಹಿಮಾಚ ಪ್ರದೇಶದ ಒಂದು ಜನಪ್ರಿಯ ಆಕರ್ಷಣೆ. 672 ಮೀ. ಉದ್ದಳತೆಯನ್ನು ಹೊಂದಿರುವ ಈ ಕೆರೆಯನ್ನು ಹಿಮಾಚಲ ಪ್ರದೇಶದ ಅತಿ ದೊಡ್ಡ ಕೆರೆಯೆಂದು ಪರಿಗಣಿಸಲಾಗಿದೆ. ದಂತಕಥೆಯ ಪ್ರಕಾರ, ಸಪ್ತರ್ಷಿಗಳಲ್ಲಿ ಒಬ್ಬರಾದ ಜಮದಗ್ನಿಯು ಒಂದೊಮ್ಮೆ ಸಿಟ್ಟಿನ ಭರದಲ್ಲಿ, ತನ್ನ ಪತ್ನಿಯಾದ ರೇಣುಕಾಳನ್ನು ಕೊಲ್ಲಲು ಮಗನಾದ ಪರಶುರಾಮನಿಗೆ ಆಜ್ಞಾಪಿಸಿದರು. ಅದರಂತೆ ಪರಶುರಾಮನು ಸ್ವತಃ ತನ್ನ ತಾಯಿಯನ್ನೆ ಕೊಂದನು. ತದನಂತರ ಇಬ್ಬರಿಗೂ ತಪ್ಪಿನ ಅರಿವಾಗಿ ತೀವ್ರವಾಗಿ ಪಾಶ್ಚಾತಾಪ ಪಟ್ಟು ಅವಳ ಗೌರವಾರ್ಥವಾಗಿ ರೇಣುಕಾ ಮಲಗಿರುವ ಭಂಗಿಯಲ್ಲಿ ಈ ಕೆರೆಯನ್ನು ಸೃಷ್ಟಿಸಿದರು. ಪ್ರತಿ ನವಂಬರ್ ತಿಂಗಳಿನಲ್ಲಿ ಉತ್ಸವವೊಂದು ಇಲ್ಲಿ ನಡೆಯುತ್ತಿದ್ದು, ಆ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಪ್ರವಾಸಿಗರು, 3214 ಮೀ ಸರಹದ್ದುಳ್ಳ ಈ ಕೆರೆಯಲ್ಲಿ ಬೋಟಿಂಗ್ ರೈಡ್ ಅನ್ನೂ ಕೂಡ ಆಸ್ವಾದಿಸಬಹುದು. ಈ ಕೆರೆಯ ದಡದಲ್ಲಿ ರೇಣುಕಾ ದೇವಿಯ ದೇಗುಲವೊಂದಿದ್ದು, ಭೇಟಿ ನೀಡಲು ಯೋಗ್ಯವಾಗಿದೆ.

Please Wait while comments are loading...