ಹಿಮಾಚಲ ಪ್ರದೇಶದಲ್ಲಿರುವ ನಹಾನ್‌ನಲ್ಲಿರುವ ಪಕ್ಕಾ ತಲಾಬ್ ಒಂದು ಪ್ರಮುಖ ಪ್ರವಾಸಿ ತಾಣ. ಇದೊಂದು ಪ್ರಶಾಂತ ವಾತಾವರಣ. ಇಲ್ಲಿನ ಕೊಳದಲ್ಲಿ ಪ್ರವಾಸಿಗರು ಮೀನು ಹಿಡಿಯಬಹುದು. ವಿವಿಧ ಪ್ರಬೇಧದ ಮೀನುಗಳು ಇಲ್ಲಿ ಕಾಣಸಿಗುತ್ತವೆ. ಇದರ ಜೊತೆಗೆ ಪಕ್ಕಾ ತಲಾಬ್‌ನಲ್ಲಿ ಸುಂದರವಾದ ಕಾರಂಜಿಯೊಂದಿದೆ. ಇದು ಈ ಕೆರೆಗೆ ಇನ್ನಷ್ಟು ಕಳೆಗಟ್ಟುತ್ತವೆ. ಆದಾಗ್ಯೂ ಈ ಪ್ರದೇಶ ಇನ್ನೂ ಅಭಿವೃದ್ಧಿ ಹೊಂದುತ್ತಿದೆ. ಆದರೆ ಪ್ರವಾಸಿಗರಿಗೆ ಸೂಕ್ತವಾದ ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಉದ್ಯಾನವಿದೆ.
ಈ ಪ್ರದೇಶದಲ್ಲಿನ ಅತ್ಯಂತ ಕುತೂಹಲದ ಸಂಗತಿ ಎಂದರೆ ಎರಡು ಪ್ರಮುಖ ಹಬ್ಬಗಳು ಇಲ್ಲಿ ನಡೆಯುತ್ತವೆ. ಗುಗ್ಗಾ ಪೀರ‍್ ಹಬ್ಬ ಮತ್ತು ಬಮನ್ ದ್ವಾದಶಿ ಮೇಳ. ಇಲ್ಲಿಗೆ ಸಮೀಪದ ಮಾರುಕಟ್ಟೆಯಲ್ಲಿ ತಾಜಾ ತರಕಾರಿಗಳು ಲಭ್ಯವಿರುತ್ತವೆ. ನಹಾನ್‌ನ ಏಕೈಕ ರೈಲ್ವೆ ರಿಸರ್ವೇಶನ್ ಕೇಂದ್ರ ಇಲ್ಲಿದೆ.


Click it and Unblock the Notifications