ಹಿಮಾಚಲ ಪ್ರದೇಶದ ಜೈತಕ್ ಪರ್ವತದಲ್ಲಿರುವ ಜೈತಕ್ ಕೋಟೆ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ನಹಾನ್‌ನಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಈ ತಾಣವನ್ನು ಪ್ರವಾಸಿಗರು ಸುಲಭವಾಗಿ ತಲುಪಬಹುದು. ಐತಿಹಾಸಿಕವಾಗಿ, ನಹಾನ್‌ನ ಅತ್ಯಂತ ಹಳೆಯ ಕೋಟೆ ಇದು. 1810 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಗೋರ್ಖಾಗಳ ಮುಖ್ಯಸ್ಥ ರಂಜೋರ‍್ ಸಿಂಗ್ ಥಾಪಾ ಮತ್ತು ಆತನ ಹಿಂಬಾಲಕರು ನಹಾನ್ ಕೋಟೆಯ ಮೇಲೆ ದಾಳಿ ಮಾಡಿದ್ದರು. ನಂತರ ಜೈತಕ್ ಗುಡ್ಡದ ಮೇಲೆ ಈ ಕೋಟೆಯನ್ನು ನಿರ್ಮಿಸಿದರು. ಈ ನಿರ್ಮಾಣಕ್ಕೆ ನಹಾನ್ ಕೋಟೆಯ ಸಾಮಗ್ರಿಯನ್ನೇ ಬಳಸಿಕೊಂಡಿದ್ದರು.
ಜೈತಕ್ ಗುಡ್ಡದ ಮೇಲೆ ನಿಂತು ನೋಡಿದರೆ ಇಲ್ಲಿರುವ ಸುಂದರ ವಾತಾವರಣದ ಅದ್ಭುತ ರಮ್ಯ ದೃಶ್ಯವನ್ನು ನೋಡಬಹುದು.


Click it and Unblock the Notifications