ವೇದಾರಣ್ಯಂ, ನಾಗಪಟ್ಟಿನಂ

ನಾಗಪಟ್ಟಿನಂ ಜಿಲ್ಲೆಯ ಒಂದು ನಗರಸಭೆ ವೇದಾರಣ್ಯಂ. ಇಲ್ಲಿನ ವೇದಾರಣ್ಯೇಶ್ವರರ್ ದೇವಾಲಯದಿಂದಾಗಿ ಈ ಪಟ್ಟಣ ತನ್ನ ಹೆಸರನ್ನು ಪಡೆಯಿತು. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಚೋಳ ಸಾಮ್ರಾಜ್ಯದ ಪರಂತಕ ರಾಜನಿಂದ ನಿರ್ಮಿತವಾಗಿದೆ. ಇದಲ್ಲದೆ, ಇನ್ನೂ ಹಲವಾರು ದೇವಾಲಯಗಳನ್ನು ಈ ನಗರದಲ್ಲಿ ಕಾಣಬಹುದಾಗಿದೆ. ಇನ್ನುಳಿದಂತೆ ಇಲ್ಲಿ ಸುತ್ತಾಡಲು ಕೆಲವು ಆಕರ್ಷಣೆಗಳೂ ಸಹ ಇದ್ದು, ಅವುಗಳಲಲ್ಲಿ ಪ್ರಮುಖವಾದವುಗಳೆಂದರೆ, ಸಾಲ್ಟ್ ಸತ್ಯಾಗ್ರಹ ಸ್ಮಾರಕ ಸ್ತೂಪ,  ಆಯುರ್ವೇದಿಕ್ ಗಿಡಮೂಲಿಕೆಗಳ ಕಾಡು, ಐತಿಹಾಕ ಮಹತ್ವದ ದೀಪ ಗೋಪುರ (ಲೈಟ್ ಹೌಸ್), ರಾಮರ್ ಪಾಥಂ ಮತ್ತು ಎಟ್ಟುಕುಡಿ ಮುರುಗನ್ ದೇವಾಲಯ.

Please Wait while comments are loading...