ಭಗವಾನ್ ಶ್ರೀ ಶಂಕರನ ಬೃಹತ್ ಮೂರ್ತಿಯು ಕೇಂದ್ರಭಾಗದಲ್ಲಿ ಇರುವುದರಿಂದ, ಈ ಮಂದಿರಕ್ಕೆ ಶಿವ್ ಚೌಕ್ ಎಂದು ಹೆಸರಿಸಲಾಗಿದೆ. ಶಿವ್ ಚೌಕ್ ನಗರದ ಹೃದಯ ಭಾಗದಲ್ಲಿದ್ದು, ಜನದಟ್ಟಣೆಯಿಂದ ಕೂಡಿದ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸ್ಥಳಗಳಿಂದ ಸುತ್ತುವರೆದಿದೆ. ತಮ್ಮ ತಮ್ಮ ವೃತ್ತಿಗೆ ತೆರಳುವ ಜನರು ಅದಕ್ಕೆ ಮೊದಲು, ಪ್ರತಿದಿನ ಭಗವಾನ್ ಶಂಕರನನ್ನು ಪ್ರಾರ್ಥಿಸಲು, ಇಲ್ಲಿಗೆ ಆಗಮಿಸುತ್ತಾರೆ. ಶಿವ್ ಚೌಕ್ ನ ಬೃಹತ್ ನಿರ್ಮಿತಿಯು, ಮುಜಫರ್ ನಗರದ ಅತಿ ಪ್ರಸಿದ್ಧವಾದ ಗುರುತಿನ ಸ್ಥಳವಾಗಿದೆ.


Click it and Unblock the Notifications