ದೇವಿ ದುರ್ಗಾಮಾತೆಯ ಆರಾಧಕರಿಗೆ, ದುರ್ಗಾ ಧಾಮ್ ಪ್ರಸಿದ್ಧ ಸ್ಥಳವಾಗಿದೆ. ಭಗವಾನ್ ಶಿವನ ಸನಿಹದಲ್ಲಿಯೇ 51 ಅಡಿ ಎತ್ತರದ, ದೊಡ್ಡದಾದ ಮತ್ತು ಸುಂದರವಾದ ದುರ್ಗಾದೇವಿಯ ಮೂರ್ತಿಯಿದೆ. ಅಲ್ಲಿಯೇ ಸಮೀಪದಲ್ಲಿ ಒಂದು ಪ್ರಾಕೃತಿಕ ಗುಹೆಯಿದೆ. ದೇವ, ದೇವಿಯರಿಗೆ ಪ್ರಾರ್ಥನೆಯನ್ನು ಸಲ್ಲಿಸಲು ಅನೇಕ ಭಕ್ತಾದಿಗಳು ಧಾಮವನ್ನು ಪ್ರತಿದಿನ ಸಂದರ್ಶಿಸುತ್ತಾರೆ ಹಾಗೂ ಕ್ಷಮಾನುಗ್ರಹಕ್ಕಾಗಿ ಅನೇಕ ತ್ಯಾಗ ಸಂಕಲ್ಪ ಗಳನ್ನು ಕೈಗೊಳ್ಳುತ್ತಾರೆ. ಧಾರ್ಮಿಕ ಹಬ್ಬಹರಿದಿನಗಳಂದು, ವಿಶೇಷವಾಗಿ ನವರಾತ್ರಿಗಳಂದು ಧಾಮವು ಸಹಸ್ರಾರು ಆರಾಧಕರನ್ನು ಆಕರ್ಷಿಸುತ್ತದೆ.


Click it and Unblock the Notifications