ಬಿಹಾರದ ಯೋಗಶಾಲೆಯನ್ನು 1964ರಲ್ಲಿ ಸ್ವಾಮಿ ಸತ್ಯಾನಂದರು ಸ್ಥಾಪಿಸಿದರು. ಪ್ರಪಂಚದಾದ್ಯಂತ ಈ ಯೋಗ ತರಬೇತಿ ಶಾಲೆ ಪ್ರಸಿದ್ಧವಾಗಿದೆ. ಈ ಶಾಲೆ ಯೋಗ ಮತ್ತು ಅದರಿಂದುಂಟಾಗುವ ವ್ಯಕ್ತಿತ್ವ ವಿಕಸನದ ಪರಿಯನ್ನು ಭೋದಿಸುತ್ತದೆ. ಈ ಸುಂದರ ಶಾಲೆಯು ಗಂಗಾ ನದಿಯ ತೀರದಲ್ಲಿದ್ದು ಪ್ರಪಂಚದ ಎಲ್ಲ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಜಾತಿ, ವರ್ಗ, ವರ್ಣ ಮತ್ತು ದೇಶ ಭೇದವಿಲ್ಲದೆ ಇಲ್ಲಿ ಯೋಗವನ್ನು ಕಲಿಸಲಾಗುತ್ತದೆ. ಯೋಗ ಶಿಕ್ಷಣವು ಮನುಷ್ಯ ಬದುಕಿನ ದೈಹಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳತ್ತ ತನ್ನ ಗಮನವನ್ನು ಕೇಂದ್ರಿಕರಿಸಿದೆ.
ಯೋಗದ ಪ್ರಯೋಜನಗಳು ಎಲ್ಲರಿಗೂ ತಿಳಿದಿರುವಂತದೆ ಆದ್ದರಿಂದ ತನ್ನ ಬೋಧನಾ ವಿಧಾನಗಳ ಮೂಲಕ ಈ ಶಾಲೆಯು ಯೋಗದ ಬಗೆಗಿನ ಅರಿವನ್ನು ಹೆಚ್ಚಿಸುತ್ತಿದೆ. ಈ ವಿಧಾನಗಳು ಬಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ವಿವಿಧ ಕಾಲೇಜುಗಳು, ಬಂಧೀಖಾನೆಗಳು, ಆಸ್ಪತ್ರೆಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಬಳಸಲಾಗುತ್ತದೆ. ಈ ಶಾಲೆಯು ವಿವಿಧ ವಲಯಗಳು ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರಗಳಲ್ಲಿನ ಯೋಗ ಸಂಬಂಧಿ ಯೋಜನೆಗಳಿಗೆ ಮಾರ್ಗದರ್ಶನ ಮಾಡುತ್ತದೆ.


Click it and Unblock the Notifications