ಮುಕ್ತೇಶ್ವರ್ ಪ್ರವಾಸಿ ಬಂಗಲೆಯು ಮುಕ್ತೇಶ್ವರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮುಕ್ತೇಶ್ವರ್ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಮೊದಲಿಗೆ ಲೋಕೋಪಯೋಗಿ ಇಲಾಖೆಯ(ಪಿ ಡಬ್ಲ್ಯು ಡಿ) ಪ್ರವಾಸಿ ಬಂಗಲೆಯಾಗಿತ್ತು. ಇದನ್ನು ಕುಮಾವೂನ್ ಮಂಡಲ್ ವಿಕಾಸ್ ಯೋಜನೆಯವರು ನಿರ್ವಹಣೆ ಮಾಡುತ್ತಿದ್ದುದರಿಂದ ಇದನ್ನು ಕೆ ಎಮ್ ವಿ ಎನ್ ವಿಶ್ರಾಂತಿ ಗೃಹ ಎಂದು ಕರೆಯಲಾಗುತ್ತಿತ್ತು. ದಾಖಲೆಗಳ ಪ್ರಕಾರ, ಪ್ರಖ್ಯಾತ ಬ್ರಿಟೀಷ್ ಬೇಟೆಗಾರ ಮತ್ತು ಪರಿಸರ ತಜ್ಞರಾಗಿದ್ದ ಜಿಮ್ ಕಾರ್ಬೆಟ್, ಭಯಾನಕ ನರಭಕ್ಷಕ ಹುಲಿಗಳನ್ನು ಕೊಲ್ಲುವುದಕ್ಕಾಗಿ ಇಲ್ಲಿ ತಮ್ಮ ಜೀವನದ ಅಮೂಲ್ಯ ಕಾಲವನ್ನು ಕಳೆದಿದ್ದರು. ಪ್ರವಾಸಿಗರು ಇಲ್ಲಿ ಒಂದೆರಡು ದಿನಗಳ ಮಟ್ಟಿಗೆ ಉಳಿಯುವುದಿದ್ದರೆ ಲಾಡ್ಜಿಂಗ್ ಸೌಲಭ್ಯ ದೊರೆಯುತ್ತದೆ.


Click it and Unblock the Notifications