ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿಕೊಡುವ ನಕ್ಕಿ ಕೆರೆ ಮೌಂಟ್ ಅಬುವಿನ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ. ಇದು 1200 ಮೀಟರ್ ಎತ್ತರದಲ್ಲಿರುವ ಭಾರತದ ಏಕೈಕ ಕೃತಕ ಕೆರೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಇದು ಪ್ರಶಾಂತವಾದ ಮತ್ತು ನಯನಮನೋಹರವಾದ ಬೆಟ್ಟಗಳ ಹಿನ್ನಲೆಯಲ್ಲಿ ನೆಲೆಗೊಂಡಿದೆ. ಈ ಕೆರೆಗೆ ’ ನಕ್ಕಿ’ ಎಂಬ ಹೆಸರು ಒಂದು ದಂತಕಥೆಯ ಸಲುವಾಗಿ ಬಂದಿದೆ. ಅದರ ಪ್ರಕಾರ ಈ ಕೆರೆಯನ್ನು ದೇವತೆಗಳು ತಮ್ಮನ್ನು ತಾವು ದುಷ್ಟ ರಾಕ್ಷಸರಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ನಖಗಳಿಂದ (ಉಗುರು) ತೋಡಿದರಂತೆ. ಇನ್ನೊಂದು ದಂತಕಥೆಗಳ ಪ್ರಕಾರ ಈ ಕೆರೆಯನ್ನು ದಿಲ್ವಾರ ಜೈನ ದೇವಾಲಯವನ್ನು ಕಡೆದ ಶಿಲ್ಪಿ ರಾಸಿಯ ಬಾಲಮ್, ಒಂದೇ ರಾತ್ರಿಯಲ್ಲಿ ತೋಡಿದನಂತೆ.
ಪ್ರವಾಸಿಗರು ಇಲ್ಲಿರುವ ಮಹಾತ್ಮ ಗಾಂಧೀಜಿಯವರ ಗಾಂಧಿ ಘಾಟ್ ಸ್ಮಾರಕಕ್ಕೆ ಭೇಟಿಕೊಡಬಹುದು. ಫೆಬ್ರವರಿ 12,1948 ರಂದು ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಈ ಕೆರೆಯಲ್ಲಿ ವಿಸರ್ಜಿಸಲಾಯಿತು.
ಈ ಕೆರೆಯ ಬಳಿಯಲ್ಲಿ ಹಲವಾರು ಕಲ್ಲಿನ ಬೆಟ್ಟಗಳಿವೆ. ಇವು ಪ್ರವಾಸಿಗರಿಗೆ ಮತ್ತು ಸಾಹಸಿಗರಿಗೆ ಶಿಲಾರೋಹಣದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೆ ನಕ್ಕಿ ಕೆರೆಯ ಶಾಂತವಾದ ಮತ್ತು ಸೌಮ್ಯವಾದ ವಾತಾವರಣದಲ್ಲಿ ದೋಣಿಯಾನ ಮಾಡುತ್ತ ಕಾಲ ಕಳೆಯುವ ಅವಕಾಶ ಇಲ್ಲಿ ಎಲ್ಲರಿಗು ಲಭಿಸುತ್ತದೆ.


Click it and Unblock the Notifications