Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಆಕರ್ಷಣೆಗಳು » ಗುರು ಶಿಖರ್ ಶೃಂಗ

ಗುರು ಶಿಖರ್ ಶೃಂಗ, ಮೌಂಟ್ ಅಬು

1

ಗುರು ಶಿಖರ್ ಶೃಂಗವು ಅರಾವಳಿ ಪ್ರಾಂತ್ಯದಲ್ಲಿರುವ ಉನ್ನತ ಶೃಂಗವಾಗಿದೆ. ಮೌಂಟ್ ಅಬುವಿನಿಂದ 15 ಕಿ.ಮೀ ದೂರದಲ್ಲಿರುವ ಈ ಶೃಂಗವು, ಸಮುದ್ರ ಮಟ್ಟದಿಂದ 1722 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಶೃಂಗವು ಚಾರಣಕ್ಕಾಗಿ ಪ್ರಸಿದ್ಧಿ ಪಡೆದಿದ್ದು, ಪ್ರವಾಸಿಗರು ಇಲ್ಲಿಗೆ ಆ ಕಾರಣವಾಗಿಯೆ ಆಗಮಿಸುತ್ತಿರುತ್ತಾರೆ. ಇದಲ್ಲದೆ ಪ್ರವಾಸಿಗರು ಈ ಬೆಟ್ಟದ ತುದಿಯಿಂದ ಸಂಪೂರ್ಣವಾದ ಅರಾವಳಿ ಪ್ರಾಂತ್ಯದ ಪಕ್ಷಿನೋಟವನ್ನು ಕಾಣಬಹುದಾಗಿದೆ. ಈ ಗಿರಿ ಶೃಂಗದ ಮೇಲೆ ಪ್ರಾಚೀನವಾದ ಗುರು ದತ್ತಾತ್ರೇಯ ದೇವಾಲಯವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರವೆಂದು ಭಾವಿಸಲಾಗಿರುವ ಗುರು ದತ್ತಾತ್ರೇಯರಿಗಾಗಿ ನಿರ್ಮಿಸಲಾಗಿದೆ. ಈ ಬೆಟ್ಟದ ಮೇಲೆ ಶಿವನ ದೇವಾಲಯ , ಮೀರಾ ದೇವಾಲಯ ಮತ್ತು ಚಾಮುಂಡಿ ದೇವಾಲಯಗಳನ್ನು ಕಾಣಬಹುದು. ಇದರೊಂದಿಗೆ ಈ ಬೆಟ್ಟವು ಮೌಂಟ್ ಅಬು ವೀಕ್ಷಣಾಲಯವನ್ನು ಹೊಂದಿದೆ. ಇದು ಭೂನೆಲೆಯಲ್ಲಿ ಸ್ಥಾಪಿತಗೊಂಡಿರುವ ಇನ್ಫ್ರಾರೆಡ್ ಅಂತರಿಕ್ಷ ವೀಕ್ಷಣಾ ಕೇಂದ್ರವಾಗಿದೆ. ಈ ವೀಕ್ಷಣಾಲಯವು ಭೌತಿಕ ಸಂಶೋಧನಾ ಪ್ರಯೋಗಾಲಯ ದ {Physical Research Laboratory (PRL)} ಆಡಳಿತಕ್ಕೆ ಒಳಪಟ್ಟಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat