ಆಧಾರ್ ದೇವಿ ದೇವಾಲಯವು ಮೌಂಟ್ ಅಬುವಿನ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.ದುರ್ಗಾ ದೇವಿಯ ಈ ದೇವಾಲಯವು ಗಿರಿಶೃಂಗದಲ್ಲಿದ್ದು, ಒಂದು ಗುಹೆಯಲ್ಲಿ ನೆಲೆಗೊಂಡಿದೆ. ಭಕ್ತಾಧಿಗಳು ಇಲ್ಲಿಗೆ ತಲುಪಲು 365 ಮೆಟ್ಟಿಲುಗಳನ್ನು ಹತ್ತಬೇಕು. ಇವು ವರ್ಷದ 365 ದಿನಗಳ ಸಂಕೇತವಾಗಿದೆ. ಬೃಹತ್ ಸಂಖ್ಯೆಯಲ್ಲಿ ದುರ್ಗಾ ದೇವಿಯ ಆಶೀರ್ವಾದವನ್ನು ಪಡೆಯಲು ಆಗಮಿಸುವ ಭಕ್ತಾಧಿಗಳನ್ನು, ಇಲ್ಲಿನ ದೂರ ಪ್ರಯಾಣವು ಯಾವುದೆ ರೀತಿಯಿಂದ ವಿಚಲಿತಗೊಳಿಸುವುದಿಲ್ಲ.


Click it and Unblock the Notifications