ಮೋರಿ ಹತ್ತಿರದಲ್ಲಿರುವ ಜಖೋಲ್ ಹಳ್ಳಿಯಲ್ಲಿ ನೆಲೆಸಿದೆ ದುರ್ಯೋಧನ ದೇವಾಲಯ. ಈ ದೇವಾಲಯವು, ಉತ್ತರಾಖಂಡದಲ್ಲೆ ಮಹಾಕಾವ್ಯ ಮಹಾಭಾರತದ ಪಾತ್ರಧಾರಿಯಾದ ದುರ್ಯೋಧನನಿಗೆ ಮೀಸಲಾದ ದೇವಾಲಯಗಳಲ್ಲಿ ದೊಡ್ಡದಾದ ದೇವಸ್ಥಾನವಾಗಿದೆ. ಈ ದೇವಾಲಯವನ್ನು ಸೌರ್ ಹಳ್ಳಿಯ ನಿವಾಸಿಗಳು ನಿರ್ಮಿಸಿದ್ದಾರೆಂದು ನಂಬಲಾಗಿದೆ. ಇದಲ್ಲದೆ, ಒಸ್ಲಾ, ಗಂಗರ್ ಮತ್ತು ದತ್ಮಿರ್ಕನ್ ನಂತಹ ಸ್ಥಳಗಳಲ್ಲಿ ಕೌರವರಿಗೆ ಮೀಸಲಾದ ದೇವಾಲಯಗಳನ್ನು ಕಾಣಬಹುದು. ಕೌತುಕದ ವಿಷಯವೆಂದರೆ ಇಲ್ಲಿನ ನಿವಾಸಿಗಳು ತಮ್ಮನ್ನು ತಾವು ಕೌರವ ಹಾಗು ಪಾಂಡವರ ವಂಶಸ್ಥರೆಂದು ನಂಬಿದ್ದಾರೆ.


Click it and Unblock the Notifications