ಈ ದೇವಾಲಯ ಶ್ರೀಕೃಷ್ಣ ಪರಮಾತ್ಮ ಮತ್ತು ಅವನ ಪ್ರಿಯತಮೆಯಾದ ರಾಧಗೆ ಅರ್ಪಿಸಲಾಗಿದೆ. ಈ ದೇವಾಲಯವು ಚಾಂದೌಸಿ ರಾಂಬಾಗ್ ರಸ್ತೆಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಯಾವುದೇ ಸಂಘ ಸಂಸ್ಥೆಗಳಿಂದ ನೋಡಿ ಕೊಳ್ಳಲ್ಪಡುತ್ತಿಲ್ಲ. ಇದನ್ನು ದೇವಾಲಯದ ಅರ್ಚಕರು ಮತ್ತು ಅವರ ಕುಟುಂಬದವರಿಂದ ನೋಡಿಕೊಳ್ಳಲ್ಪಡುತ್ತದೆ. ಅವರು ದೇವಾಲಯದ ಆಸುಪಾಸಿನಲ್ಲಿ ವಾಸವಾಗಿರುತ್ತಾರೆ.
ಇಲ್ಲಿನ ಪ್ರಮುಖ ಹಬ್ಬವೆಂದರೆ ಕೃಷ್ಣ ಜನ್ಮಾಷ್ಠಮಿ ಅಥವಾ ಶ್ರೀಕೃಷ್ಣ ಜನುಮದಿನ. ಇದಲ್ಲದೇ ಇತರ ಹಬ್ಬಗಳನ್ನೂ ಬೇರೆ ಬೇರೆ ಸಂದರ್ಭದಲ್ಲಿ ಆಚರಿಸಲಾಗುತ್ತದೆ.


Click it and Unblock the Notifications