ಗಾಂಧಿ ಬಾಗ್ ಮೀರತ್ ನ ಕೇಂದ್ರ ಭಾಗದಲ್ಲಿರುವ ಉದ್ಯಾನವಾಗಿದೆ. ನಗರದ ಪ್ರಮುಖ ರಸ್ತೆಯಲ್ಲೇ ಈ ಉದ್ಯಾನವಿದೆ. ಇದನ್ನು ಕಂಪೆನಿ ಗಾರ್ಡನ್ ಎಂದೂ ಕರೆಯಲಾಗುತ್ತದೆ. ಇಲ್ಲಿ ಪ್ರತೀ ದಿನ ಸಂಜೆ ಚಿಮ್ಮುವ ಸಂಗೀತ ಕಾರಂಜಿಯನ್ನು ನೋಡಲು ಸ್ಥಳೀಯರು ಹಾಗೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉದ್ಯಾನಕ್ಕೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗಿದೆ ಮತ್ತು ಪ್ರವಾಸಿಗರಿಗೆ ಸುತ್ತಾಡಲು ವಿಶಾಲವಾದ ಪ್ರದೇಶವಿದೆ. ಇದು ಭೇಟಿಯ ಪ್ರಮುಖ ಸ್ಥಳವಾಗಿದೆ ಮತ್ತು ಗಿಜಿಗುಡುವ ನಗರದ ವಾತಾವರಣದಿಂದ ಬರುವ ಜನರಿಗೆ ಇದು ಮನರಂಜನೆಯೊಂದಿಗೆ ಶಾಂತಿ ಹಾಗೂ ಪ್ರಶಾಂತತೆಯನ್ನು ಒದಗಿಸುತ್ತದೆ.


Click it and Unblock the Notifications