ಮಥುರಾದಲ್ಲಿರುವ ಎಲ್ಲ ಘಟ್ಟಗಳಲ್ಲಿ ವಿಶ್ರಾಮ್ ಘಾಟ್ ಬಹಲ ಜನಪ್ರಿಯವಾದದ್ದು. ಇಲ್ಲೇ ಕಂಸನನ್ನು ಸೋಲಿಸಿ ಶ್ರೀಕೃಷ್ಣನು ಕೆಲಹೊತ್ತು ವಿಶ್ರಮಿಸಿಕೊಂಡ ಎಂಬ ಕಥೆ ಜನಜನಿತವಾಗಿದೆ. ಅತ್ಯಂತ ಜನಪ್ರಿಯ ಮಂದಿರಗಳು, ಗುಡಿಗಳು ಈ ವಿಶ್ರಾಮ್ ಘಾಟ್ ನ ಸುತ್ತಮುತ್ತಲೂ ಇವೆ. ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಬೆಳಗುವ ಆರತಿ ನಿಜಕ್ಕೂ ಕಣ್ಮನ ತಣಿಸುವಂಹುದು. ದೇಶದ ಎಲ್ಲಾ ಭಾಗಗಳಿಂದ ಭಕ್ತರು ಶ್ರೀಕೃಷ್ಣನಿಗೆ ಪ್ರಾರ್ಥನೆಗಳನ್ನು ಮತ್ತು ಸಿಹಿತಿಂಡಿಗಳನ್ನು ಸಮರ್ಪಿಸಲು ಇಲ್ಲಿಗೆ ಬರುತ್ತಾರೆ.
ಈ ವಿಶ್ರಾಮ್ ಘಾಟ್ ಸಾಕಷ್ಟು ಬಾರಿ ಹಾನಿಗೆ ಒಳಗಾಗಿ ಮರುನಿರ್ಮಾಣವಾಗಿದೆ. ಭಾರತದ ಮೇಲೆ ಹಿಂದೆ ದಾಳಿಗಳು ನಡೆದಾಗ ಈ ಘಾಟ್ ಸಾಕಷ್ಟು ಹಾನಿಗೊಳಗಾಗಿತ್ತು. ಸಿಕಂದರ್ ಲೋದಿಯ ಕಾಲದಲ್ಲಿ ಇಬ್ಬರು ವೈಷ್ಣವ ಸಂತರು ಈ ಘಟ್ಟವನ್ನು ದುರಸ್ತಿ ಮಾಡುವ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದರು.


Click it and Unblock the Notifications