ಮಥುರಾ ಪಟ್ಟಣ ಪ್ರಾಚೀನ ತಾಣಗಳು, ಧಾರ್ಮಿಕ ಪೂಜಾ ಸ್ಥಳಗಳಿಗೆ ಪ್ರಸಿದ್ಧಿ ಹೊಂದಿದ್ದರೂ ಈ ಗೀತಾ ಮಂದಿರವು ಇತ್ತೀಚೆಗಷ್ಟೆ ಸೇರ್ಪಡೆಯಾಗಿದೆ. ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ ಪರಿವಾರವಾದ ಬಿರ್ಲಾ ಪರಿವಾರವು ಈ ಗೀತಾ ಮಂದಿರವನ್ನು ಕಟ್ಟಿಸಿದೆ.
ಈ ಗೀತಾ ಮಂದಿರದ ಗೋಡೆಗಳ ಮೇಲೆ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಯ ಸಾಲುಗಳನ್ನು ಕೆತ್ತಿಸಲಾಗಿದೆ. ಹಾಗೆಯೆ, ಹಿಂದೂ ದೇವತೆಗಳ ಸುಂದರವಾದ ಕೆತ್ತನೆಯೂ ಇಲ್ಲಿ ಕಂಡುಬರುತ್ತದೆ. ಪ್ರವಾಸಿಗರು ತಮ್ಮ ಪೂಜೆ ಹಾಗು ಪ್ರಾರ್ಥನೆಗಳನ್ನು ಸಲ್ಲಿಸಲು ಇಲ್ಲಿ ಬರುತ್ತಾರೆ. ಇಲ್ಲಿರುವ ಚಿತ್ರಕತೆ ಮತ್ತು ಶಿಲ್ಪಕಲೆಯು ಹಿಂದೂ ಸಂಸ್ಕೃತಿ, ಸಂಪ್ರದಾಯ ದ್ಯೋತಕವಾಗಿದೆ.
ಈ ಮಂದಿರ ವಾರದ ಏಳೂ ದಿನಗಳಲ್ಲಿ ತೆರೆದಿರುತ್ತದೆ. ಜನ್ಮಾಷ್ಟಮಿ ಹಾಗು ಹೋಳಿಯಂತಹ ವಿಶೇಷ ಸಂದರ್ಭಗಳಲ್ಲಿ ವಿಶೇಷವಾದ ಪ್ರಾರ್ಥನೆಗಳು ಹಾಗು ಪೂಜೆಗಳು ಜರುಗುತ್ತವೆ. ದೀಪಾಲಂಕಾರದಿಂದ ಮಂದಿರವು ಝಗಮಗಿಸುತ್ತಿರುತ್ತದೆ.


Click it and Unblock the Notifications