ಆರ್ಥುಂಕಲ್ ಸಮುದ್ರ ತೀರವು ಪ್ರಶಾಂತವಾದ ತಾಣ. ಒಂದೆಡೆ ಸಮುದ್ರ ಇನ್ನೊಂದೆಡೆ ಹಳ್ಳಿಯು ಸುತ್ತುವರಿದಿದೆ. ಈ ಬೀಚ್, ಸರ್ಕಾರದ ಅಧಿಕೃತ ಪ್ರವಾಸಿ ತಾಣವೂ ಹೌದು. ಪ್ರಶಾಂತ ಪ್ರದೇಶದಲ್ಲಿ ಏಕಾಂತವಾಗಿ ಸಮಯ ಕಳೆಯುವ ಮನಸಿದ್ದವರಿಗೆ ಇದು ಅತ್ಯಂತ ಸೂಕ್ತ ತಾಣ. ಬೀಚ್ಗೆ ಬರುವುದಕ್ಕೆ ಸೂಕ್ತವಾದ ಸಮಯವೆಂದರೆ ಸಂಜೆ 3.30 ರಿಂದ 4.30. ಸೂರ್ಯ ಇನ್ನೇನು ಮುಳುಗುತ್ತಿರುವಾಗ ತೀರದ ಮರಳಿನ ಮೇಲೆ ಬೀಳುವ ಬೆಳಕು ಸ್ವರ್ಗದ ಕಲ್ಪನೆಯನ್ನು ನೀಡುತ್ತದೆ. ಸಮುದ್ರ ತೀರದಲ್ಲಿ ಯಥೇಚ್ಛವಾಗಿ ಬೆಳೆದಿರುವ ಪಾಮ್ ಟ್ರೀಗಳು, ಮೀನುಗಾರರ ಬೋಟ್ಗಳು ಮತ್ತು ಹಳ್ಳಿಗರ ನಿತ್ಯದ ಜಂಜಾಟದ ಮಧ್ಯೆಯೂ ಬೀಚ್ ಪ್ರಶಾಂತವಾಗಿರುತ್ತದೆ.
ಆರ್ಥುಂಕಲ್ ಚರ್ಚ್ಗೆ ಬಂದ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ. ಅಂದಹಾಗೆ ಚರ್ಚ್ಗೆ ಕ್ರಿಶ್ಚಿಯನ್ನರೂ ಸೇರಿದಂತೆ ಲಕ್ಷಾಂತರ ಹಿಂದೂಗಳು ಆಗಮಿಸುತ್ತಾರೆ. ಆರ್ಥಂಕಲ್ಗೆ ಒಂದು ವಿಶಿಷ್ಟ ಸೌಂದರ್ಯವನ್ನು ನೀಡಿದ್ದು ಸಮುದ್ರ ತೀರ ಮತ್ತು ಚರ್ಚ್. ಆರ್ಥುಂಕಲ್, ಮಾಂಸ, ಕೋಳಿ ಮತ್ತು ಮೀನಿನ ಮಾರುಕಟ್ಟೆಗೂ ಜನಪ್ರಿಯ.


Click it and Unblock the Notifications