ಗುಜರಾತ್ ನ ಎರಡು ಪ್ರಮುಖ ನಗರಗಳಾದ ಭುಜ್ ಮತ್ತು ಕಛ್ ನಡುವೆ ಸಂಪರ್ಕ ನೀಡುವ ಹೆದ್ದಾರಿಯಲ್ಲಿರುವ ಪುಂಡೈ ಪಾಡಿಯಾ ಗ್ರಾಮದಲ್ಲಿನವಜೀವನ ನೈಸರ್ಗಿಕ ಚಿಕಿತ್ಸಾ ಕೇಂದ್ರ. ಪಂಚಕರ್ಮ, ಯೋಗ, ಧ್ಯಾನ, ನ್ಯಾಚುರೋಪತಿ ಮೊದಲಾದ ನೈಸರ್ಗಿಕ ವಿಧಾನಗಳ ಮೂಲಕ ವಿವಿಧ ವ್ಯಾಧಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ಸುಮಾರು ನಲವತ್ತು ಎಕರೆ ಭೂಮಿಯಲ್ಲಿ ಸಾವಯಯ ವಿಧಾನದಿಂದ ಗಿಡಮೂಲಿಕೆ ಹಾಗೂ ಆಶ್ರಮಕ್ಕೆ ಅಗತ್ಯವಿರುವ ತರಕಾರಿಗಳನ್ನು ಬೆಳೆಯಲಾಗುತ್ತದೆ.


Click it and Unblock the Notifications