Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡ್ವಿ » ಆಕರ್ಷಣೆಗಳು » ವಿಜಯ್ ವಿಲಾಸ್ ಅರಮನೆ

ವಿಜಯ್ ವಿಲಾಸ್ ಅರಮನೆ, ಮಾಂಡ್ವಿ

4

1929ರಲ್ಲಿ ಅಂದಿನ ಅರಸರಾಗಿದ್ದ ರಾವ್ ವಿಜಯರಾಜ್ಜಿಯವರು ನಿರ್ಮಿಸಿದ್ದರು. ನಂತರ ಬ್ರಿಟಿಶರು ಈ ಪ್ರದೇಶವನ್ನು ಆಕ್ರಮಿಸಿಕೊಂಡು ಈ ಅರಮನೆಯನ್ನು ತಮ್ಮ ಬೇಸಿಗೆಯ ವಿಹಾರಧಾಮವನ್ನಾಗಿ ಮಾರ್ಪಾಡಿಸಿದ್ದರು. ಬ್ರಿಟಿಶರ ಹಲವು ಸಮಾಧಿಗಳು ಈ ಸ್ಥಳದಲ್ಲಿರುವ ಕಾರಣ ಅಂದಿನ ದಿನಗಳಲ್ಲಿ ಈ ಅರಮನೆ ಪಡೆದಿದ್ದ ಮಹತ್ವವನ್ನು ಗಮನಿಸಬಹುದು. ರಾಜಪೂತ ಶೈಲಿಯಲ್ಲಿ ನಿರ್ಮಿಸಿರುವ ಈ ಅರಮನೆಯ ಪ್ರಧಾನ ಬುರುಜು ಪ್ರಮುಖ ಆಕರ್ಷಣೆಯಾಗಿದೆ. ಅಕ್ಕಪಕ್ಕದಲ್ಲಿ ಬಂಗಾಲದ ಶೈಲಿಯ ಚಿಕ್ಕ ಬುರುಜುಗಳಿವೆ.

ಬಣ್ಣದ ಗಾಜುಗಳ ಚಿತ್ತಾರದಿಂದ ನಿರ್ಮಿಸಿರುವ ಕಿಟಕಿಗಳು ಕಲಾವೈವಿಧ್ಯವನ್ನು ಸಾರುತ್ತವೆ. ಕಿಟಕಿಯ ಚೌಕಟ್ಟಿನಲ್ಲಿ ಕೆತ್ತಿರುವ ಸೂಕ್ಷ್ಮ ಕೆತ್ತನೆಯ ಕೆಲಸ ಅತ್ಯಂತ ಸುಂದರವಾಗಿದ್ದು ಪ್ರವಾಸಿಗರ ಮನಸೆಳೆಯುತ್ತದೆ. ಲಗಾನ್, ಹಂ ದಿಲ್ ದೇ ಚುಕೇ ಸನಂ ಮೊದಲಾದ ಹಿಂದಿ ಚಲನಚಿತ್ರಗಳನ್ನು ಈ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ. ಈ ಅರಮನೆಯನ್ನು ನಿರ್ಮಿಸಲು ರಾಜಸ್ತಾನ, ಪಶ್ಚಿಮ ಬಂಗಾಳ ಹಾಗೂ ಕಛ್ ಪ್ರದೇಶದಿಂದ ಕುಶಲಕರ್ಮಿಗಳನ್ನು ಕರೆಸಿ ಶ್ರೇಷ್ಥವಾದ ಕಲಾವಂತಿಕೆಯ ಅರಮನೆಯನ್ನು ನಿರ್ಮಿಸಲಾಗಿತ್ತು. ಈ ಅರಮನೆ ಇಂದಿಗೂ ಪೂರ್ಣವಾಗಿ ಸುಸ್ಥಿತಿಯಲ್ಲಿದ್ದು ಪ್ರವಾಸಿಗರ ಮನದಲ್ಲಿ ಶಾಶ್ವತ ಛಾಪನ್ನು ಮೂಡಿಸುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed