ದ ಶ್ಯಾಮಜೀ ಕೃಷ್ಣ ವರ್ಮಾ ಮೆಮೋರಿಯಲ್ ಎಂದೂ ಕರೆಯಲ್ಪಡುವ ಈ ಕಟ್ಟಡ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮಜೀ ಕೃಷ್ಣ ವರ್ಮಾ ರವರ ಕೊಡುಗೆಯನ್ನು ವಿಶದಪಡಿಸುತ್ತದೆ. ಇಲ್ಲಿರುವ ಕಲಶಗಳಲ್ಲಿ ಶ್ಯಾಮಜೀ ಕೃಷ್ಣ ವರ್ಮಾ ಹಾಗೂ ಅವರ ಪತ್ನಿ ಭಾನುಮತಿಯವರ ಅಸ್ಥಿಗಳನ್ನಿರಿಸಲಾಗಿದೆ. ಅಕ್ಟೋಬರ್ 4,2009ರಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಂದ ಶಂಕುಸ್ಥಾಪನೆಯಾದ ಕೇವಲ ಹದಿನಾಲ್ಕು ತಿಂಗಳುಗಳಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಗುರುವಾರದ ಹೊರತು ಇತರ ದಿನಗಳಲ್ಲಿ ತೆರೆದಿರುವ ಕ್ರಾಂತಿ ತೀರ್ಥ್ ನಲ್ಲಿ ದೆಹಲಿಯ ಇಂಡಿಯಾ ಹೌಸ್, ಒಂದು ಗ್ರಂಥಾಲಯ ಹಾಗೂ ಸ್ವಾತಂತ್ರ್ಯಹೋರಾಟಗಾರರ ಬಗ್ಗೆ ಸಂಶೋಧನಾ ಕೇಂದ್ರವೊಂದನ್ನೂ ಒಳಗೊಂಡಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ನೂರಾರು ಕಾರ್ಯಕರ್ತರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಖ್ಯಾತ ನಾಯಕರ ಚಿತ್ರಗಳನ್ನು ಭಾರತದ ಖ್ಯಾತ ವರ್ಣಚಿತ್ರ ಕಲಾವಿದರು ರಚಿಸಿದ್ದು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.


Click it and Unblock the Notifications