ಈ ಭಾಗದ ಪ್ರಮುಖ ಆಶ್ರಮಗಳಲ್ಲಿ ಈ ನಯಿಂಗಮಾ ಕೂಡ ಒಂದು. ಇದು ಇಲ್ಲಿರುವ 'ತಂಗ್ಕಾ' ಪೇಂಟಿಂಗ್‌ಗಳಿಂದಾಗಿ ಸಾಕಷ್ಟು ಜನಪ್ರಿಯವಾಗಿದೆ. ಈ ಪೇಂಟಿಂಗ್‌ಗಳು ಆಶ್ರಮದ ಒಳ ಗೋಡೆಯನ್ನು ಅಲಂಕರಿಸಿವೆ. ಆಶ್ರಮದ ಹಿನ್ನೆಲೆ ಅವಲೋಕಿಸಿದಾಗ ತಿಳಿದು ಬರುವ ಅಂಶ, ದಲೈಲಾಮಾ ಟಿಬೇಟ್‌ನಿಂದ ಉಚ್ಛಾಟಿತರಾಗಿ ಭಾರತಕ್ಕೆ ಬಂದಿದ್ದ ಸಮಯದಲ್ಲಿ ಇಲ್ಲಿ ಇದನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ಹೀಗಾಗಿ ಇದೀಗ 100 ವರ್ಷ ಹಳೆಯ ಆಶ್ರಮ ಎನಿಸಿಕೊಂಡಿದೆ.


Click it and Unblock the Notifications