ದೇವ ಶಿವನಿಗೆ ಮೀಸಲಾಗಿದೆ ಈ ಮಹಾಮೃತ್ಯುಂಜಯ ದೇವಾಲಯ. ಇಲ್ಲಿನ ದೇವರ ವಿಗ್ರಹ ಅತ್ಯಂತ ಆಕರ್ಷಕವಾಗಿದೆ. ಧ್ಯಾನ ರೂಪದಲ್ಲಿರುವ ಶಿವನ ವಿಗ್ರಹ ಇಲ್ಲಿ ಕಮಲದ ಹೂವಿನ ಮೇಲೆ ಕುಳಿತ ಭಂಗಿಯಲ್ಲಿದೆ. ಧ್ಯಾನ ರೂಪದಲ್ಲಿರುವ ಶಿವ ಕಣ್ಣು ತೆರೆದ ಸ್ಥಿತಿಯಲ್ಲಿದ್ದಾನೆ. ಇಲ್ಲಿ ಶಿವನಿಗೆ ನಾಲ್ಕು ಕೈಗಳಿದ್ದು ಬಲ ಮೇಲು ಕೈ ಆಶೀರ್ವದಿಸುವ ರೀತಿಯಲ್ಲಿದೆ. ಎಡ ಮೇಲುಗೈ ನೀರಿನಿಂದ ತುಂಬಿದ ಬಿಂದಿಗೆ ಹಿಡಿದಿದೆ. ಕೆಳ ಬಲಗೈ ಭೂಮಿಸ್ಪರ್ಶ ಮುದ್ರೆಯನ್ನು ಹೊಂದಿದ್ದರೆ ಕೆಳ ಎಡಗೈ ಕಮಂಡಲವನ್ನು ಹಿಡಿದಿದೆ. ಇದರಲ್ಲಿ ನೀರಿದೆ.


Click it and Unblock the Notifications