ಹಚ್ಚ ಹಸಿರು ಹುಲ್ಲು ಹಾಗೂ ದೇವದಾರ್ ಮರಗಳಿಂದ ಸುತ್ತುವರಿದ ಅತ್ಯಂತ ಆಕರ್ಷಕ ತಾಣ ಕಮ್ರುನಾಗ್ ಕೆರೆ. ಮಂಡಿ ಜಿಲ್ಲೆಯಲ್ಲಿರುವ ಈ ಕೆರೆ ಸಮುದ್ರ ಮಟ್ಟದಿಂದ 3334 ಮೀಟರ್ ಎತ್ತರದಲ್ಲಿದೆ. ಮಂಡಿ-ಕರಸೋಗ ಮಾರ್ಗದಲ್ಲಿ ಇದಿದೆ. ಬಾಲ ಕಣಿವೆ ಹಾಗೂ ಹಿಮದಿಂದ ಆವೃತ್ತವಾದ ಧೌಲಾಧರ್ ಬೆಟ್ಟಗಳ ಶ್ರೇಣಿ ಸುತ್ತಲೂ ಹೊಂದಿರುವ ಅತ್ಯಾಕರ್ಷಕ ನೋಟ ಈ ಕೆರೆ ಸಮೀಪದಲ್ಲಿ ಗೋಚರಿಸುತ್ತದೆ.
ಕಮ್ರು ನಾಗ್ ದೇವಾಲಯ ಇದರ ಸಮೀಪವೇ ಇದೆ. ಇದೊಂದು ಶಾಶ್ವತ ಆಕರ್ಷಣೆಯ ತಾಣ. ಚಳಿಗಾಲದಲ್ಲಿ ಕೆರೆಯ ನೀರು ಸಂಪೂರ್ಣ ಹಿಮಗಟ್ಟುತ್ತದೆ. ಕೆರೆಗೆ ತೆರಳಬೇಕೆಂದರೆ ಟ್ರೆಕ್ಕಿಂಗ್ ಮಾರ್ಗದ ಮೂಲಕ ಮಾತ್ರ ಸಾಧ್ಯ. ಚಳಿಗಾಲಕ್ಕಿಂತ ಇಲ್ಲಿಗೆ ಬೇಸಿಗೆಯಲ್ಲಿ ಬರುವುದು ಸೂಕ್ತ. ಟ್ರೆಕ್ಕಿಂಗ್ ಕೂಡ ಆರಾಮದಾಯಕವಾಗಿರಲಿದೆ.


Click it and Unblock the Notifications