ಅರ್ಧನಾರೀಶ್ವರ ದೇವಾಲಯವು ಒಂದು ಗುರುತರವಾದ ಧಾರ್ಮಿಕ ತಾಣ. ಅರ್ಧನಾರೀಶ್ವರ ಮಾದರಿಯ ವಿನ್ಯಾಸವನ್ನೇ ದೇವಾಲಯ ಹೊಂದಿದೆ. ಇಲ್ಲಿ ಆರಾಧಿಸಲ್ಪಡುವ ದೇವರು ಅರ್ಧ ಭಾಗ ಪುರುಷ ಹಾಗೂ ಅರ್ಧ ಭಾಗ ನಾರಿಯನ್ನು ಪ್ರತಿನಿಧಿಸುತ್ತಾನೆ. ಇಲ್ಲಿರುವ ವಿಗ್ರಹ ಶಿವ ಹಾಗೂ ಪಾರ್ವತಿಯನ್ನು ಪ್ರತಿನಿಧಿಸುತ್ತದೆ.
ಮೂರ್ತಿಯ ಬಲಭಾಗ ಶಿವನನ್ನು ಹಾಗೂ ಎಡಭಾಗ ಪಾರ್ವತಿಯನ್ನು ಪ್ರತಿನಿಧಿಸುತ್ತವೆ. ಪುರುಷನ ಜೀವನದಲ್ಲಿ ಸ್ತ್ರೀಯ ಪಾತ್ರ ಅತ್ಯಂತ ಪ್ರಮುಖ ಎನ್ನುವುದನ್ನು ತೋರಿಸುವ ಮಾದರಿಯಲ್ಲಿ ಈ ದೇಗುಲ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಭಾರತೀಯ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ಅತ್ಯಂತ ಮಹತ್ವಪೂರ್ಣ ದೇಗುಲ ಎಂದು ಪರಿಗಣಿಸಿದೆ. ಅಪರೂಪದ ವಾಸ್ತುಶಿಲ್ಪ ಹಾಗೂ ವಿನ್ಯಾಸದಿಂದ ಇದು ಜನಪ್ರಿಯವಾಗಿದೆ.


Click it and Unblock the Notifications