Search
  • Follow NativePlanet
Share
ಮುಖಪುಟ » ಸ್ಥಳಗಳು » ಮನಾಲಿ » ಆಕರ್ಷಣೆಗಳು » ರೊಹತಂಗ್‌ ಪಾಸ್‌

ರೊಹತಂಗ್‌ ಪಾಸ್‌, ಮನಾಲಿ

5

ವಿಶ್ವದ ಅತಿ ಎತ್ತರದ ಜೀಪ್ ಹೊಡೆಯಬಹುದಾದ ರಸ್ತೆ ಎಂಬ ಹೆಗ್ಗಳಿಕೆಗೆ ರೊಹತಂಗ್‌ ಪಾಸ್‌ ಭಾಜನವಾಗಿದೆ. ಅಪಾರ ಸಂಖ್ಯೆಯ ಅರಣ್ಯ ಸಂಪತ್ತು ಒಳಗೊಂಡಿರುವ ಈ ತಾಣ ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ. ಮನಾಲಿಯಿಂದ 51 ಕಿ.ಮೀ. ದೂರದಲ್ಲಿರುವ ರೊಹತಂಗ್‌ ಪಾಸ್‌ ಕುಲ್ಲು ಜತೆಗೆ ಲಾಹೌಲ್‌ ಹಾಗೂ ಸ್ಪಿತಿಯನ್ನು ಹಾದು ಹೋಗುತ್ತದೆ. ಇದು ಸಮುದ್ರ ಮಟ್ಟದಿಂದ 4111 ಮೀಟರ್‌ ಎತ್ತರದಲ್ಲಿದೆ. ಅತ್ಯಾಕರ್ಷಕ ಬೆಟ್ಟ, ಗುಡ್ಡಗಳನ್ನು ಒಳಗೊಂಡು ಆಕರ್ಷಣೀಯವಾಗಿದೆ. ಸುಂದರ ಭೂ ಪರಿಸರ ಒಳಗೊಂಡಿದೆ. ಇವೆಲ್ಲದರ ಜತೆಗೆ ಇದೊಂದು ಟ್ರೆಕ್ಕಿಂಗ್‌ಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಪ್ರವಾಸಿಗರು ಇಚ್ಛಿಸಿದರೆ ಗುಡ್ಡ ಹತ್ತುವುದು, ಬಂಡೆ ಏರುವುದು, ಸೈಕ್ಲಿಂಗ್‌ ಸೇರಿದಂತೆ ಹಲವು ವಿಧದ ಚಟುವಟಿಕೆಯಲ್ಲಿ ಭಾಗಿಯಾಗಬಹುದು.

ಮೇ ತಿಂಗಳಲ್ಲಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗುವ ಈ ಪ್ರದೇಶ ಸೆಪ್ಟೆಂಬರ್‌ನಲ್ಲಿ ಮುಚ್ಚಲ್ಪಡುತ್ತದೆ. ಇದಕ್ಕೆ ಕಾರಣ ಅಪಾರ ಸಂಖ್ಯೆಯಲ್ಲಿ ಸುರಿಯುವ ಹಿಮ. ಅತಿಯಾದ ಚಳಿಗಾಳಿ ಹಾಗೂ ವಿಪರೀತ ಹಿಮಪಾತ ಆಗುವ ಕಾರಣ ಈ ಭಾಗದಲ್ಲಿ ಸಂಚರಿಸುವುದು ಕೂಡ ಅಪಾಯಕಾರಿ. ಇಲ್ಲಿಗೆ ಭೇಟಿ ನೀಡಲು ಬಯಸುವ ಪರಿಸರ ಪ್ರೇಮಿಗಳು, ಪ್ರವಾಸಿಗರು ಭಾರತೀಯ ಸೇನೆಯ ಪರವಾನಗಿ ಪಡೆದುಕೊಳ್ಳಬೇಕು. ಇವರು ಸುರಕ್ಷಿತ ವಾಹನದಲ್ಲಿ ಕರೆತಂದು ಎಲ್ಲವನ್ನೂ ತೋರಿಸುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed