ಸಮುದ್ರ ಮಟ್ಟದಿಂದ 4268 ಮೀಟರ್ ಎತ್ತರದಲ್ಲಿದೆ ಈ ಹಂಪ್ತಾ ಪಾಸ್. ಮನಾಲಿಯ ಪ್ರಮುಖ ಟ್ರೆಕ್ಕಿಂಗ್ ತಾಣಗಳಲ್ಲಿ ಇದೂ ಒಂದು. ಇಲ್ಲಿನ ಲಾಹೌಲ್‌ನಲ್ಲಿರುವ ಚಂದ್ರಾನದಿಯ ಉಗಮ ತಾಣದವರೆಗೆ ಪ್ರವಾಸಿಗರು ತೆರಳಬಹುದು. ಇಲ್ಲಿ ತೆರಳುವ ಪ್ರವಾಸಿಗರು ಟ್ರೆಕ್ಕಿಂಗ್ ಮಜಾ ಅನುಭವಿಸುವ ಜತೆಗೆ ಬಾರಾ ಶಿಂಗ್ರಿ ಗ್ಲಾಸೇರ್‌ನ್ನು ತಗ್ಗು ಭಾಗದಲ್ಲಿ ಕಾಣಬಹುದು. ಇಲ್ಲಿನ ಹಂಪ್ತಾ ಸ್ಟ್ರೀಮ್‌ಗೆ ಸಾಕಷ್ಟು ಸೇತುವೆ ನಿರ್ಮಿಸಿದ್ದು, ಇವೆಲ್ಲವೂ ಹಿಮ ಸೇತುವೆಗಳೆನಿಸಿಕೊಂಡಿವೆ.


Click it and Unblock the Notifications