ಬೆಟ್ಟದ ನಡುವೆ ಇರುವ ಈ ಗಧನ್ ಥೆಕ್ಛೊಕ್ಲಿಂಗ್ ಗೊಂಪಾ ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರ. ಮನಾಲಿಯಲ್ಲಿ ನಲೆಸಿರುವ ಬೌದ್ಧ ಧರ್ಮಿಯರ ಪವಿತ್ರ ಕ್ಷೇತ್ರವಾಗಿದೆ. ಇದರ ನಿರ್ಮಾಣ 1960 ರಲ್ಲಿ ಆಗಿದೆ. ಟಿಬೆಟ್‌ನಿಂದ ಭಾರತಕ್ಕೆ ವಲಸೆ ಬಂದ ಭಾರಿ ಪ್ರಮಾಣದ ವಲಸಿಗರಿಗೆ ಇದು ನೆಲೆ ಒದಗಿಸಿದೆ. ಹಳದಿ ಮೇಲ್ಛಾವಣಿಯನ್ನು ಗೊಂಪಾ ಹೊಂದಿದೆ. ಪಗೋಡಾ ಮಾದರಿಯ ಪಾರಂಪರಿಕ ಶೈಲಿಯ ಗೋಪುರ ನಿರ್ಮಾಣ ಇಲ್ಲಾಗಿದೆ.
ಇಲ್ಲಿ ಬುದ್ಧನ ವಿಗ್ರಹ ಮಾತ್ರವಲ್ಲದೆ, ಸಾಕಷ್ಟು ಚಿತ್ರಪಟಗಳು ಗಮನ ಸೆಳೆಯುತ್ತವೆ. ಇವೆಲ್ಲವೂ ಬೌದ್ಧ ಧರ್ಮಿಯರ ಯೋಚನಾ ಲಹರಿಯನ್ನು ಹರಿಬಿಡುತ್ತವೆ. ಟಿಬೇಟಿಯನ್ ಧಂಗೆ ಸಂದರ್ಭದಲ್ಲಿ ಮಡಿದ ಎಲ್ಲಾ ವ್ಯಕ್ತಿಗಳ ಹೆಸರನ್ನು ಇಲ್ಲಿ ಬರೆದಿಡಲಾಗಿದೆ. ಇದನ್ನು ಸಾರ್ವಜನಿಕರಿಗೆ ಕಣ್ಣಿಗೆ ಕಾಣುವಂತೆ ಪ್ರದರ್ಶಿಸಲಾಗಿದೆ ಕೂಡ. ಪ್ರವಾಸಿಗರು ಇಲ್ಲಿ ಟಿಬೇಟಿಯನ್ ಕರಕುಶಲ ವಸ್ತುಗಳು, ಕಾರ್ಪೆಟ್‌ಗಳನ್ನು ಕೊಳ್ಳಬಹುದು. ಗೊಂಪಾದ ಆವರಣದಲ್ಲಿಯೇ ಇದಕ್ಕೆ ಮಳಿಗೆ ನೀಡಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದು ನಿತ್ಯ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.


Click it and Unblock the Notifications