ಮಲ್ಪೆಯಲ್ಲಿ ಪ್ರವಾಸಿಗರು ಅತೀ ಹೆಚ್ಚು ನೋಡಲು ಇಷ್ಟಪಡುವ ಸ್ಥಳವೆಂದರೆ ಮಲ್ಪೆ ಬೀಚ್. ಈ ಬೀಚ್ ವು ಚೊಕ್ಕಟ್ಟಿನ ವಾತಾವರಣ ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲಿ ದೊರೆಯುವ ರುಚಿಕರವಾದ ಸ್ಥಳೀಯ ತಿನಿಸುಗಳಿಂದಾಗಿ ಪ್ರಸಿದ್ದ. ಈ ಬೀಚ್ ನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತವೆ. ಬೀಚ್ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಇತ್ತೀಚೆಗೆ ಬಹಳಷ್ಟು ಹೆಚ್ಚಿದೆ.
ಬೀಚ್ ಗೆ ಭೇಟಿ ಕೊಡುವ ಪ್ರವಾಸಿಗರು ಸಾಮಾನ್ಯವಾಗಿ ದೋಣಿ ವಿಹಾರ, ಆಂಗಲಿಂಗ್, ತರಂಗ ಸವಾರಿ ಹಾಗೂ ಮೀನುಗಾರಿಕೆ ಮಾಡುವಲ್ಲಿ ತೊಡಗುತ್ತಾರೆ . ಬೀಚ್ ನ ಆಸುಪಾಸಿನಲ್ಲಿ ಕೂಡ ಅನೇಕ ರೆಸಾರ್ಟ್ ಗಳು ಉಳಿದುಕೊಳ್ಳಲು ಹಾಗೂ ಮನೋರಂಜನೆಗೆ ಸೌಕರ್ಯಗಳನ್ನು ಒದಗಿಸುತ್ತಿವೆ . ಮಲ್ಪೆ ಬೀಚ್ ವು ಮೀನುಗಾರಿಕೆಯ ಹಡಗುದಾಣ. ತಂಪಾದ ಗಾಳಿ , ತಾಳೆ ಮರಗಳು ಜೊತೆಗೆ ಸಣ್ಣ ಅಲೆಗಳು ಬೀಚ್ ನ ಅಂದವನ್ನು ಇಮ್ಮಡಿಗೊಳಿಸುತ್ತವೆ.
ಮಲ್ಪೆಯು ಉಡುಪಿಯಿಂದ 6 ಕಿಮೀ ನಷ್ಟು ದೂರದಲ್ಲಿದೆ . ಉಡುಪಿ ರೈಲ್ವೇ ನಿಲ್ದಾಣವು ಸಮೀಪದಲ್ಲೇ ಇದೆ . ಮಲ್ಪೆಗೆ ರಸ್ತೆಯ ಮೂಲಕ ಕೆಲವೇ ಕ್ಷಣಗಳಲ್ಲಿ ತಲುಪಬಹುದು . ಉಡುಪಿಯಿಂದ ಮಲ್ಪೆ ಬಸ್ ನಿಲ್ದಾಣಕ್ಕೆ ಹೋಗಲು ನಿರಂತರ ಬಸ್ ಸಂಚಾರವಿದ್ದು , ಬೀಚ್ ವು ಬಸ್ ನಿಲ್ದಾಣದಿಂದ ಕೆಲವೇ ಹೆಜ್ಜೆಗಳಷ್ಟು ಅಂತರದಲ್ಲಿದೆ.


Click it and Unblock the Notifications