ಚಂಡಿಕಾ ದೇವಿಯನ್ನು ಚಂಡಿ ದೇವಿ ಎಂದು ಕೂಡ ಕರೆಯುತ್ತಾರೆ. ಈಕೆ ಶಕ್ತಿ ದೇವತೆ. ಈಕೆಯನ್ನು ರಾಕ್ಷಸ ಸಂಹಾರಕಿ ಮತ್ತು ಭಕ್ತ ರಕ್ಷಕಿ ಎಂದು ಕರೆಯುತ್ತಾರೆ.ಇಲ್ಲಿ ಚಂಡಿಕಾ ದೇವಿಯ ಎರಡು ದೇವಾಲಯಗಳಿವೆ. ಒಂದನ್ನು ಛೋಟಿ ಚಂಡಿಕಾ ಎಂದೂ ಮತ್ತೊಂದನ್ನು ಬಡಿ ಚಂಡಿಕಾ ಎಂದೂ ಕರೆಯುತ್ತಾರೆ. ಇದರಲ್ಲಿ ಛೋಟಿ ಚಂಡಿಕಾ ದೇವಾಲಯವು ಬಾಗೇಶ್ವಾರದಿಂದ ಸುಮಾರು ಅರ್ಧಕಿಮೀ ದೂರದಲ್ಲಿದೆ. ಇದನ್ನು ಮಹೋಬಾದ ಅತಿ ಪುರಾತನ ದೇವಾಲಯ ಎಂದು ಹೇಳಲಾಗುತ್ತದೆ.
ನವರಾತ್ರಿಗಳಲ್ಲಿ ಇಲ್ಲಿಗೆ ಭಕ್ತರು ಹೆಚ್ಚಾಗಿ ಭೇಟಿ ನೀಡುತ್ತಾರೆ.


Click it and Unblock the Notifications