Search
  • Follow NativePlanet
Share
ಮುಖಪುಟ » ಸ್ಥಳಗಳು» ದಿಯೋಗಡ್

ದಿಯೋಗಡ್ - ಗುಪ್ತರ ವೈಭವತೆ ಮೆರೆವ ತಾಣ

17

ದಿಯೋಗಡ್ ವ್ಯವಸಾಯ ಪ್ರಧಾನವಾಗಿರುವ ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ. ಇದು ಮಧ್ಯಪ್ರದೇಶದ ಭವ್ಯ ರಾಜ ಪರಂಪರೆಯನ್ನು ಪ್ರತಿನಿಧಿಸುವ ಗ್ವಾಲಿಯರ್ ನಗರದ ಗಡಿ ಭಾಗದಲ್ಲಿದೆ. ಈ ಪಟ್ಟಣ ಜನಪ್ರಿಯವಾಗಿರುವುದು ಪ್ರಭಾವ ಬೀರುವಂತಹ ಗುಪ್ತರ ಕಾಲದ ಸ್ಮಾರಕಕ್ಕಾಗಿ, ಪ್ರಮುಖವಾಗಿ ಬೇತ್ವಾ ನದಿ ತೀರದಲ್ಲಿರುವ ಕೋಟೆ ಮತ್ತು ಕೋಟೆಯ ಹೊರಗಡೆ ಇರುವ ಜೈನರ ಮತ್ತು ಹಿಂದೂ ಸಂಪ್ರದಾಯದ ಕೆಲವು ಸ್ಮಾರಕಗಳಿಂದಾಗಿ.

ದಿಯೋಗಡ್ ಸುತ್ತಮುತ್ತವಿರುವ ಪ್ರವಾಸಿ ಸ್ಥಳಗಳು

ದಿಯೋಗಡ್ ಪ್ರವಾಸೋದ್ಯಮ ಪ್ರವಾಸಿಗರಿಗೆ ಕೆಲವು ಕುತೂಹಲಕಾರಿ ಪುರಾತನ ಕಾಲದ ಸ್ಮಾರಕ, ದೇವಾಲಯಗಳು ಮತ್ತು ದಶಾವತಾರ ದೇವಾಲಯಗಳಿಂದ ಭರವಸೆ ಮೂಡಿಸುತ್ತದೆ. ದಶಾವತಾರ ದೇವಾಲಯ ಈ ಹಿಂದೆ ಜನಪ್ರಿಯವಾಗಿರುವಂತೆ ಉತ್ತರ ಭಾರತದ ಪಾಂಚ್ಯತನ ದೇವಾಲಯವಾಗಿದೆ. ಪ್ರಸ್ತುತ, ದೇವಾಲಯವು ಬಹುಮಟ್ಟಿಗೆ ಶಿಥಿಲಾವಸ್ಥೆಯಲ್ಲಿದ್ದರೂ, ಹಲವು ಆಸಕ್ತಿಭರಿತ ವಿಶೇಷಣಗಳನ್ನು ಒಳಗೊಂಡಿದೆ. ಅವುಗಳಲ್ಲಿ ದೇವತೆಯರಾದ ಗಂಗೆ ಮತ್ತು ಯಮುನೆಯ ಕೆತ್ತಿದ ವಿಗ್ರಹಗಳು ಮನಸೆಳೆಯುತ್ತವೆ.

ಮತ್ತೊಂದು ಕುತೂಹಲಕಾರಿ ಸ್ಥಳವೆಂದರೆ ದಿಯೋಗಡ್ ಕೋಟೆ, ಇದನ್ನು ಕೀರ್ತಿಗಿರಿ ದುರ್ಗ ಕೋಟೆಯೆಂದೂ ಕರೆಯಲಾಗುತ್ತದೆ. ಇದು ಇಸವಿ 1057ರ ಕಾಲದಲ್ಲಿ ಚಂಡೇಲಾ ಪ್ರದೇಶದ ರಾಜ ಕೀರ್ತಿವರ್ಮನ್‍ನಿಂದ ನಿರ್ಮಿತವಾಗಿದೆ ಎನ್ನುತ್ತದೆ ಇತಿಹಾಸ. ಕೆಲವು ಜೈನ ದೇವಾಲಗಳೂ ಕೋಟೆಯ ಹತ್ತಿರವಿದೆ. ಈ ದೇವಾಲಯಗಳಲ್ಲಿ ಪುರಾತನವಾದದ್ದು ಸುಮಾರು ಎಂಟರಿಂದ ಒಂಬತ್ತನೇ ಶತಮಾನದಲ್ಲಿ ನಿರ್ಮಿತವಾಗಿದೆ. ದೇವಾಲಯವು ಮೂರು ಹಂತದ ಮೆಟ್ಟಿಲುಗಳನ್ನು ಒಳಗೊಂಡಿದ್ದು ಅವುಗಳ ಮೂಲಕ ಸುಲಭವಾಗಿ ನದಿಯನ್ನು ತಲುಪಬಹುದಾಗಿದೆ. ದಿಯೋಗಡ್ ವಸ್ತು ಸಂಗ್ರಹಾಲಯ ಕೂಡಾ ಭೇಟಿ ನೀಡುವುದಕ್ಕೆ ಸೂಕ್ತ. ದಿಯೋಗಡ್ ಪ್ರವಾಸೋಧ್ಯಮ ಕುಶಲಗಾರಿಗೆ ವಸ್ತು ಸಂಗ್ರಹಾಲಯ ನೋಡಲು ಬಯಸುವವರಿಗಂತೂ ಕಣ್ಣಿಗೆ ಹಬ್ಬ ನೀಡುತ್ತದೆ ಮತ್ತು ಇದರಿಂದ ಒಳ್ಳೆಯ ಶೋಧನೆ ಕೂಡಾ ನಡೆಸಬಹುದಾಗಿದೆ.

ದಿಯೋಗಡ್ ತಲುಪುದು ಹೇಗೆ?

ದಿಯೋಗಡ್ ನಗರವನ್ನು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು. ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಲಲಿತಪುರ ಮತ್ತು ಸಮೀಪದ ವಿಮಾನ ನಿಲ್ದಾಣವೆಂದರೆ ಗ್ವಾಲಿಯರ್.

ದಿಯೋಗಡ್ ಭೇಟಿ ನೀಡಲು ಯಾವ ಸಮಯ ಸೂಕ್ತ

ದಿಯೋಗಡ್ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವೆಂದರೆ ವರ್ಷ್ಯಾಂತ್ಯದಲ್ಲಿ.

ದಿಯೋಗಡ್ ಪ್ರಸಿದ್ಧವಾಗಿದೆ

ದಿಯೋಗಡ್ ಹವಾಮಾನ

ಉತ್ತಮ ಸಮಯ ದಿಯೋಗಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ದಿಯೋಗಡ್

  • ರಸ್ತೆಯ ಮೂಲಕ
    ವಾಹನಗಳ ಮೂಲಕ ತಲುಪಲು ರಸ್ತೆಗಳಿದ್ದು, ದಿಯೋಗಡ್ ಸುತ್ತಮುತ್ತಲಿನ ಸ್ಥಳಗಳಿಂದ ಈ ನಗರಕ್ಕೆ ಯುಪಿಎಸ್ಟಿಸಿ (UPSTC) ಬಸ್ಸುಗಳು ಮತ್ತು ಖಾಸಾಗಿ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಲಲಿತಪುರ. ದಿಯೋಗಡ್ ನಗರಕ್ಕೆ ದೆಹಲಿ, ಮುಂಬೈ ಮತ್ತು ಅಲಹಾಬಾದ್ ನಗರದಿಂದ ರೈಲು ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಮೀಪದ ವಿಮಾನ ನಿಲ್ದಾಣವೆಂದರೆ ಗ್ವಾಲಿಯರ್ ಇದು ದಿಯೋಗಡ್ ನಗರದಿಂದ 235 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City