Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ಕಾಲೇಶ್ವರ ದೇವಸ್ಥಾನ

ಕಾಲೇಶ್ವರ ದೇವಸ್ಥಾನ, ಮಹೇಶ್ವರ

1

ಪವಿತ್ರ ನರ್ಮದ ನದಿಯ ಉತ್ತರದ ತೀರದಲ್ಲಿ ಈ ಕಾಲೇಶ್ವರ ದೇವಸ್ಥಾನವು ನೆಲೆಗೊಂಡಿದೆ. ಈ ದೇವಾಲಯವನ್ನು ಕ್ರಿ.ಶ 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಸ್ಥಾನದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಶಿವನನ್ನು  ಪ್ರಳಯ ಮತ್ತು ವಿನಾಶ ಸ್ವರೂಪನಾದ ಕಾಲೇಶ್ವರನ ಅವತಾರದಲ್ಲಿ ಆರಾಧಿಸಲಾಗುತ್ತದೆ. ಕಾಲೇಶ್ವರ ಈ ಅದ್ಭುತವಾದ ದೇವಾಲಯವು ಎತ್ತರದ ವೇದಿಕೆಯ ಮೇಲೆ ಸ್ಥಿತಗೊಂಡಿದ್ದು, ಕೆಂಪು ವರ್ಣದಿಂದ ಪಳಪಳನೇ ಹೊಳೆಯುತ್ತಿದೆ.

ಪ್ರವಾಸಿಗರಿಗೆ ಈ ದೇವಸ್ಥಾನದಲ್ಲಿ ಅದ್ಬುತವಾದಂತಹ ಲಂಬ ಪ್ರಕ್ಷೇಪಯುಳ್ಳ ಮೇಲ್ಮುಖವಾದ ಸುರುಳಿ ಗೊಮ್ಮಟಗಳು ಕಾಣ ಸಿಗುತ್ತವೆ. ಕಾಲೇಶ್ವರ ದೇವಾಲಯವು ಹಸಿರು ಸಮೃದ್ಧಿಯಿಂದ ಕೂಡಿದು ಕಣ್ಣಿಗೆ ಹಿತವೆನಿಸುವ ವಾತಾವರಣವನ್ನು ಹೊಂದಿದೆ. ಇದು  ಭಕ್ತರಲ್ಲಿ  ತೀವೃವಾದ ಆದ್ಯಾತ್ಮಿಕತೆ ಮತ್ತು ಭಕ್ತಿ ಪರವಶತೆಯ ಭಾವನೆಗಳನ್ನು ತಂದು ಅವರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಈ ದೇವಾಲಯದಲ್ಲಿ ಶಿವನ ವಿನಾಶಕಾರಿ ಪುನರ್ಜನ್ಮ ಅಥವಾ ಅವತಾರದ ಸ್ವರೂಪವನ್ನು ಆರಾಧಿಸಲಾಗುತ್ತದೆ.

ಮಹೇಶ್ವರದಲ್ಲಿರುವ ಎಲ್ಲ ದೇವಾಲಯಗಳಿಗಿಂತಲೂ ಈ ಕಾಲೇಶ್ವರ ದೇವಾಲಯವು ಬಹು ವಿಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುತ್ತದೆ. ಈ ದೇವಸ್ಥಾನವನ್ನು ಸುತ್ತುವರೆದಿರುವ ಸಮೃದ್ಧ ಹಸಿರು ವಾತಾವರಣ ಮತ್ತು ದೇವಾಲಯದ ಒಳಾಂಗಣ ವಿನ್ಯಾಸವು ಪ್ರವಾಸಿಗರನ್ನು ಆಕರ್ಷಿಸುವ ಸಂಪೂರ್ಣ ಪ್ರಯತ್ನವನ್ನು ಮಾಡುತ್ತವೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu