Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಆಕರ್ಷಣೆಗಳು » ಅಹಿಲೇಶ್ವರ ದೇವಸ್ಥಾನ

ಅಹಿಲೇಶ್ವರ ದೇವಸ್ಥಾನ, ಮಹೇಶ್ವರ

1

ಅಹಿಲೇಶ್ವರ ದೇವಸ್ಥಾನವು ಕೂಡ ಮಹೇಶ್ವರ ನಗರದಲ್ಲಿ ಶಿವನಿಗೆ ಅರ್ಪಿತವಾಗಿರುವ ದೇವಾಲಯವಾಗಿದೆ. ಈ ದೇವಾಲಯವು ಪವಿತ್ರ ನರ್ಮದ ನದಿಯ ತೀರದಲ್ಲಿ ನೆಲೆಗೊಂಡಿದೆ. ಈ ದೇವಸ್ಥಾನದಲ್ಲಿ ರಾಮನನ್ನು ಕೂಡ ಪೂಜಿಸಲಾಗುತ್ತದೆ. ಅಹಿಲೇಶ್ವರ ದೇವಾಲಯದ ಲಕ್ಷಣಗಳು ಮಹೇಶ್ವರದಲ್ಲಿರುವ ಎಲ್ಲ ದೇವಾಲಯಗಳಂತೆ ಇದೆ. ಅತ್ಯುತ್ತಮ ಕಾರ್ಯ ನೈಪುಣ್ಯತೆ ಮತ್ತು ಈ ದೇವಸ್ಥಾನದ ಗುಮ್ಮಟ ಮತ್ತು ಗೋಪುರಗಳ ವಾಸ್ತು ಶಿಲ್ಪ ಶೈಲಿ ಮತ್ತು ವಿನ್ಯಾಸ ಇದಕ್ಕೆ ಅತ್ಯುತ್ತಮ ಉದಾಹರಣೆ.

ಈ ದೇವಾಲಯದ ಆವರಣದಲ್ಲಿ ಮರಾಠ ಸೈನಿಕರ ಮತ್ತು ಆನೆಗಳ ಅದ್ಭುತವಾದ ಸುಂದರವಾದ ಕಲ್ಲಿನ ಕೆತ್ತನೆಗಳನ್ನು ಕಾಣಬಹುದು.ಇವು ದೇವಸ್ಥಾನಕ್ಕೆ ಭೇಟಿ ಕೊಡುವ ಯಾವುದೇ ಪ್ರವಾಸಿಗರ ಕಣ್ಮನಗಳನ್ನು ಆಕರ್ಷಿಸುತ್ತವೆ. ಈ ದೇವಾಲಯದ ಮಂಟಪವು ಬಹು ಆಕರ್ಷಣಿಯವಾದ, ಪ್ರಬಾವಶಾಲಿಯಾದ ಅಲಂಕಾರಣವನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಈ ದೇವಸ್ಥಾನದ ಪರಿಸರವು ಶಾಂತಿ ಮತ್ತು ಶುದ್ಧತೆಯಿಂದ ಕೂಡಿದೆ.

ಇದು ಪವಿತ್ರ ನರ್ಮದ ನದಿಯ ತೀರದ ಸಮೀಪವಿರುವುದರಿಂದ ದೇವಾಲಯದ ಶಾಂತತೆಗೆ ವಿಶಿಷ್ಟ ಲಕ್ಷಣ ಬಂದಿದೆ. ಈ ಅಹಿಲೇಶ್ವರ ದೇವಾಲಯದ ದರ್ಶನಕ್ಕಾಗಿ ಭೇಟಿ ಕೊಡುವ ಸಮಯವು ಬೆಳಿಗ್ಗೆ 7.00  ಯಿಂದ ಸಾಯಂಕಾಲ 6.30 ರವರೆಗೆ. ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೂ ಈ ದೇವಸ್ಥಾನದಲ್ಲಿ ಆರತಿಯನ್ನು ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat