Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಕಾಂಸ್ಟಾನ್ಷಿಯಾ

ಕಾಂಸ್ಟಾನ್ಷಿಯಾ, ಲಖನೌ

2

ಲಖನೌನಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ ಕಾಂಸ್ಟಾನ್ಷಿಯಾ. ಫ್ರಾನ್ಸ್ ನ ಲಿಯಾನ್ಸ್ ನ ಮೇಜರ್ ಜನರಲ್ ಕ್ಲೌಡ್ ಮಾರ್ಟಿನ್ ಅವರ ನಿವಾಸದ ಹೆಸರೇ ಕಾಂಸ್ಟಾನ್ಷಿಯಾ. ಈ ನಿವಾಸವನ್ನು 1751ರಲ್ಲಿ ನಿರ್ಮಿಸಲಾಗಿತ್ತು.ಈ ನಿವಾಸದ ಹೆಸರಿನ ಬಗ್ಗೆ ಹಲವಾರು ಕಥೆಗಳಿವೆ. ಮಾರ್ಟಿನ್ ಅವರು ತುಂಬಾ ಪ್ರೀತಿ ಮಾಡುತ್ತಿದ್ದ ಫ್ರಾನ್ಸ್ ನ ಮಹಿಳೆ ಕಾಂಸ್ಟಾನ್ಷಿಯಾ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ ಎನ್ನುವುದು ಒಂದು ಕಥೆ.

ಕಾಂಸ್ಟಾನ್ಷಿಯಾ ಸುಮಾರು 200 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ದುಬಾರಿ ಹಾಗೂ ಕೆಲವು ವಿಚಿತ್ರವಾಗಿರುವ ವಾಸ್ತುಶಿಲ್ಪ ಶೈಲಿಗಳನ್ನು ಪ್ರತಿಬಿಂಬಿಸುತ್ತದೆ. ನಿವಾಸಕ್ಕೆ ಭೇಟಿ ನೀಡಿದರೆ ಎರಡು ದೈತ್ಯಾಕಾರದ ಸಿಂಹಗಳ ಆಕರ್ಷಕ ಕಣ್ಣುಗಳು ಸೇರಿದಂತೆ ಹಲವಾರು ವಿಚಿತ್ರ ಶೈಲಿಯ ಪ್ರತಿಮೆಗಳನ್ನು ವೀಕ್ಷಿಸಬಹುದು.

ಕಾಂಸ್ಟಾನ್ಷಿಯಾದಲ್ಲಿ ಲಖನೌದ ಪ್ರಸಿದ್ಧ ಶಾಲೆ ಲಾ ಮಾರ್ಟಿನಿಯೆರಿ ಕೂಡ ಇದೆ. ಈ ಶಾಲೆಗೆ ಮಾರ್ಟಿನ್ ಹೆಸರನ್ನು ಇಡಲಾಗಿದೆ. ಮಾರ್ಟಿನ್ ಇಚ್ಛೆಯಂತೆ ಆತನ ಸಾವಿನ ಬಳಿಕ ಕಾಲೇಜನ್ನು ನಿರ್ಮಿಸಲಾಯಿತು. 1840ರಲ್ಲಿ ಈ ಶಾಲೆಯನ್ನು ಆರಂಭಿಸಲಾಯಿತು ಮತ್ತು ಎಲ್ಲಾ ಧರ್ಮಗಳ ಮಕ್ಕಳಿಗೆ ಇಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. 1800ರಲ್ಲಿ ಮೃತಪಟ್ಟ ಮಾರ್ಟಿನ್ ನ ಮಗನ ಸಮಾಧಿ ಕೂಡ ಕಾಂಸ್ಟಾನ್ಷಿಯಾದಲ್ಲಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue