ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಮೀನುಗಾರಿಕೆ ನಡೆಯುವುದು ಲೋಣಾವಲದಲ್ಲಿ. ಇಲ್ಲಿನ ಕೆರೆಗಳು, ಆಣೆಕಟ್ಟು ಪ್ರದೇಶಗಳಿಂದಾಗಿ ಈ ಪ್ರದೇಶವು ಮೀನುಗಾರಿಕೆ ಚಟುವಟಿಕೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ.
ಈ ಗುಡ್ಡ ಪ್ರದೇಶದಲ್ಲಿನ ಕೋಲಿ ಸಮುದಾಯದವರಿಗೆ ಮೀನುಗಾರಿಕೆಯೇ ಮುಖ್ಯ ಕಸುಬು. ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಕೋಲಿ ಜನಾಂಗದ ಜೀವನಶೈಲಿಯನ್ನು ನೋಡುವ ಭಾಗ್ಯವನ್ನು ತಪ್ಪಿಸಿಕೊಳ್ಳಬೇಡಿ. ಅವರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನೋಡಿ ತಿಳಿದುಕೊಳ್ಳಿ. ಅಲ್ಲಿನ ಮೀನುಗಾರರು ಯಾರಾದರೂ ನಿಮ್ಮನ್ನು ಮೀನುಗಾರಿಕೆಗೆ ತಮ್ಮ ದೋಣಿಯಲ್ಲಿ ಕರೆದೊಯ್ದರೆ ಅದು ನಿಮ್ಮ ಅದೃಷ್ಟ. ಆದರೆ ಹಾಗೊಂದು ಪ್ರಯತ್ನವನ್ನಂತೂ ನಿಮಗೆ ಸಮಯವಿದ್ದರೆ ನಡೆಸಬಹುದು.


Click it and Unblock the Notifications